ದಿನದ ಸುದ್ದಿ

ಭೀಮಾಕೊರೆಂಗಾವ್ ವಿಜಯ ಸ್ಥಂಭ ಸ್ಥಾಪನೆಗೆ ಭೂಮಿ ಪೂಜೆ

Published

on

ಸುದ್ದಿದಿನ,ಬೆಂಗಳೂರು : ನಂದಿನಿ ಬಡಾವಣೆಯ ಕಂಠೀರವ ನಗರದ ಎರಡನೇ ಹಂತದಲ್ಲಿನ ಪ್ರಸಿದ್ಧ ಡಾ.ಅಂಬೇಡ್ಕರ್ ಪಾರ್ಕಿನಲ್ಲಿ ಮಹಾರಾಷ್ಟ್ರದಲ್ಲಿನ ಭೀಮಾಕೊರೆಂಗಾವ್ ವಿಜಯಸ್ಥಂಭ ಮಾದರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಭೂಮಿ ಪೂಜೆಯನ್ನು ನಾಗಾಸೇನ ಬೌದ್ಧ ವಿಹಾರದ ಭಂತೇಜಿ ಬುದ್ದಮ್ಮನವರ ನೇತೃತ್ವದಲ್ಲಿ ನಡೆಯಿತು.

ಭೂಮಿ ಪೂಜೆ ಸಲ್ಲಿಸಿ ಮಾತಾನಾಡಿದ ಭಂತೇಜಿ ಬುದ್ದಮ್ಮನವರು “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು, ಭಾರತದ ದಲಿತ ಜನಾಂಗಕ್ಕೆ ಶಿಕ್ಷಣಕ್ಕಾಗಿ ಹೋರಾಡಿದ ಮಹಾರ್ ಸೈನಿಕರ ಶೌರ್ಯ ಮತ್ತು ಸಾಹಸವನ್ನು ಕೊಂಡಾಡಿದರು.

ಈ ಭೀಮಾಕೊರೆಂಗಾವ್ ಯುದ್ಧದ ಬಗ್ಗೆ ಮಾಹಿತಿ ಇತಿಹಾಸದ ಪುಟಗಳಿಂದ ಹೊರತೆಗೆದು ಭಾರತಕ್ಕೆ ಪರಿಚಯಿಸಿದ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರಿಗೆ ನಾವೆಲ್ಲರೂ ಋಣಿಯಾಗಿರಬೇಕೆಂದು ಹಾಗೂ ಬೆಂಗಳೂರಿನ ಹೃದಯ ಭಾಗದ ನಂದಿನಿ ಬಡಾವಣೆಯಲ್ಲಿ ಸ್ನೇಹಿತರ ಪ್ರೇರೇಪಣೆಯಿಂದ ಭೀಮಾಕೊರೆಂಗಾವ್ ವಿಜಯಸ್ಥಂಭ ಸ್ಥಾಪಿಸಲು ಮುಂದಾಗಿರುವ ಪುತ್ಥಳಿ ಮಹೇಶರವರಿಗೆ ಭೀಮ ಅಭಿನಂದನೆಗಳು ಮತ್ತು ಸ್ನೇಹಿತರಾದ ಕುಮಾರ್. ಬಸವರಾಜು. ರಂಗಸ್ವಾಮಿ. ಪರಶುರಾಮ್ ತಂಡಕ್ಕೆ ಡಾ.ಅಂಬೇಡ್ಕರ್. ಬುದ್ಧನ ಆಶೀರ್ವಾದ ಸಿಗಲಿ ಎಂದು ಪ್ರಾರ್ಥಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯ ಮುಖಂಡರು, ಅಂಬೇಡ್ಕರವಾದಿಗಳು, ಗ್ರಾಮಸ್ಥರು, ಗಣ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version