ದಿನದ ಸುದ್ದಿ

ಬಿಗ್ ಬಾಸ್ ಸೀಸನ್ 6 :ಎಲಿಮಿನೇಟ್ ಆದ್ರು ಕ್ರಿಕೆಟರ್ ರಕ್ಷಿತಾ ರೈ

Published

on

ಸುದ್ದಿದಿನ ಡೆಸ್ಕ್ : ಕ್ರಿಕೆಟರ್ ರಕ್ಷಿತಾ ರೈ ಬಿಗ್ ಬಾಸ್ ಸೀಸನ್ 6ರ‌ ಮೊದಲ‌ನೇ ಎಲಿಮಿನೇಟ್ ಸ್ಪರ್ದಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚನ ನಿರೂಪಣೆ ಯಲ್ಲಿ ಬರುತ್ತಿರುವ ಈ ಬಾರಿಯ ಬಿಗ್ ಬಾಸ್ ಹಲವು ಕುತೂಹಲಗಳೊಂದಿಗೆ ಸಾಗಿತ್ತು.

ಎಂ.ಎಸ್.ಧೋನಿಯ ಅಪ್ಪಟ ಅಭಿಮಾನಿಯಾಗಿರುವ ರಕ್ಷಿತಾ ರೈ ” ನಾನು ನನ್ನ ದಿನ ನಿತ್ಯ ಜೀವನದಲ್ಲಿ ಹೇಗಿರುತ್ತೇನೋ ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಇರುತ್ತೇನೆ ಎಂದು ಪ್ರವೇಶ ಪಡೆದಿದ್ದರು.

ಅಂದಹಾಗೆ ಇವರು ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಆಡುತ್ತಿದ್ದು, ಧೋನಿಯವರ ಜೀವನಾಧಾರಿತ ಸಿನೆಮಾವನ್ನು ಸುಮಾರು 264 ಬಾರಿ ನೋಡಿದ್ದಾಗಿ ಹೇಳಿ, ದೋನಿಯ ಬಹುದೊಡ್ಡ ಅಭಿಮಾನಿ ಎಂದು ದೃಢೀಕರಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986716401

Trending

Exit mobile version