ದಿನದ ಸುದ್ದಿ

ಬಿಗ್ ಬ್ರೇಕಿಂಗ್ | ಅರ್ಜುನ್ ಸರ್ಜಾಗೆ ಜೈಲು‌ ಗ್ಯಾರಂಟಿ : ಈ ನಾಲ್ಕು ಸಾಕ್ಷಿಗಳು ಸಾಕಾ..!?

Published

on

ಸುದ್ದಿದಿನ ಡೆಸ್ಕ್ : ಅರ್ಜುನ್ ಸರ್ಜಾ ಜೈಲಿಗೆ ಹೋಗೋದು ಸತ್ಯ..ಸತ್ಯ..ಸತ್ಯ, ಸರ್ಜಾ ಜೈಲಿಗೆ ಕಳಿಸಲು ಆ ನಾಲ್ಕು ಸಾಕ್ಷಿಗಳು ಸಾಕಾ..? ಆ ಪ್ರಮುಖ ಸಾಕ್ಷಿಗಳು ಯಾವುವು..? ಶ್ರುತಿ ಹರಿಹರನ್ ಮಾಡಿದ ಆರೋಪಕ್ಕೆ ಪೂರಕವಾಗಿವೆಯಾ ಆ ನಾಲ್ಕು ಸಾಕ್ಷಿಗಳು..? ಆ ಸಾಕ್ಷಿಗಳ ಸ್ಫೋಟಕ ಡೀಟೆಲ್ಸ್ ಸರ್ಜಾಗೆ ಮುಳುವಾಗಲಿದೆಯಾ..?

ಅರ್ಜುನ್​​ ಸರ್ಜಾ ಜೈಲಿಗೆ ಹೋಗೋದು ಸತ್ಯ ಸತ್ಯ ಸತ್ಯ ಎಕಂದ್ರೆ, ಶ್ರುತಿ ಮಾಡಿದ ಲೈಂಗಿಕ ಕಿರುಕುಳ ಆರೋಪಕ್ಕೆ ಮಹತ್ವದ ಸಾಕ್ಷಿ ಲಭ್ಯವಾಗಿದೆ. ಮಹಜರು ವೇಳೆ ಪೊಲೀಸರೆದುರು ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ ಪ್ರತ್ಯಕ್ಷದರ್ಶಿಗಳು.

ಸಂಕಷ್ಟ ತಂದ ಸಾಕ್ಷ್ಯಗಳು

  • ನಂಬರ್ 1: ಕೆಂಪಾಪುರ ಬಳಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ಸ್ಥಳಕ್ಕೆ ಪೊಲೀಸರ ಭೇಟಿ
    ಅಪ್ಪಿಕೊಳ್ಳುವ ಸೀನ್ ರಿಹರ್ಸಲ್​ನಲ್ಲಿ ಶ್ರುತಿ ಅಳುತ್ತಾ ಬಂದಿದ್ದು ನಿಜ ಎಂದ ಸಾಕ್ಷಿಗಳು
  • ನಂಬರ್ 2: ಆಕಾಶ್ ಹಾಸ್ಪಿಟಲ್​ನಲ್ಲಿ ನಡೆದ ದೃಶ್ಯದಲ್ಲೂ ಶ್ರುತಿ ಅಪ್​ಸೆಟ್​ ಆಗಿದ್ರು ಎಂದ ಸಾಕ್ಷಿಗಳು
  • ನಂಬರ್​ 3: ದೇವನಹಳ್ಳಿಯ ಸಾದಹಳ್ಳಿ ಗೇಟ್ ಟ್ರಾಫಿಕ್ ಸಿಗ್ನಲ್​​​ನ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ಶ್ರುತಿ ಹರಿಹರನ್​ರನ್ನು ಅರ್ಜುನ್ ಸರ್ಜಾ ಕರೆಯುತ್ತಿರೋ ದೃಶ್ಯ ಲಭ್ಯ
    ಸಿಗ್ನಲ್​ನಲ್ಲಿ ರೆಸಾರ್ಟ್​​ಗೆ ಬಾ ಎಂದು ಸರ್ಜಾ ಕರೆದಿದ್ರು ಎಂದು ಆರೋಪಿಸಿದ್ದ ಶ್ರುತಿ
  • ನಂಬರ್ 4: ಯುಬಿ ಸಿಟಿಯಲ್ಲಿ ಹಿಂಬದಿಯಿಂದ ನನ್ನನ್ನು ತಬ್ಬಿಕೊಂಡಿದ್ರು ಎಂದಿದ್ದ ಶ್ರುತಿ
    ಶ್ರುತಿ ಹೇಳಿದ ದಿನವೇ ಅರ್ಜುನ್ ಸರ್ಜಾ ಹೆಸರಿನಲ್ಲಿ ರೂಂ ಬುಕ್ ಸಾಬೀತು  ಈ ಸಾಕ್ಷಿಗಳ ಹಿನ್ನೆಲೆಯಲ್ಲಿ ನಾಳೆ ಅರ್ಜುನ್ ಸರ್ಜಾ ಬಂಧನ ಸಾಧ್ಯತೆವಿದೆ.

ಅರ್ಜುನ್​ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಶ್ರುತಿ ಪ್ರಕರಣದ ಸಾಕ್ಷ್ಯದಾರರು ಇಂದು ಕಬ್ಬನ್​ ಪಾರ್ಕ್​ ಠಾಣೆಗೆ ಹಾಜರ್​​ ಆಗಿದ್ದಾರೆ. ಸಾಕ್ಷಿಗಳಾದ ಕಿರಣ್, ಬೋರೇಗೌಡ, ಭರತ್​ ನೀಲಕಂಠರನ್ನು ಇಂದು ಪೊಲೀಸರು ವಿಚಾರಣೆ
ಸಾಕ್ಷಿಗಳ ವಿಚಾರಣೆ ಬಳಿಕ ಇಂದು ಅರ್ಜುನ್ ಸರ್ಜಾಗೆ ಪೊಲೀಸರಿಂದ ನೋಟಿಸ್​ ಜಾರಿಯಾಗಲಿದೆ. ನಾಳೆಯೇ ಅರ್ಜುನ್​ ಸರ್ಜಾರನ್ನು ವಿಚಾರಣೆ ಮಾಡಲಿರೋ ಪೊಲೀಸರು ವಿಚಾರಣೆ ಮಗಿದ ಬಳಿಕ ಅರ್ಜುನ್​ ಸರ್ಜಾ ಬಂಧನ ಮಾಡುವ ಸಾಧ್ಯತೆ ಇದ್ದು, ‘ಅರ್ಜುನ’ಗೆ ಕೃಷ್ಣ ಜನ್ಮಸ್ಥಾನ ಸೇರೊ ಭೀತಿ ಹೆಚ್ಚಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version