ರಾಜಕೀಯ

ರೇಪ್ ಕೇಸ್ ನಲ್ಲಿ ಪತಿ: ಬಿಹಾರ ಸಚಿವೆ ರಾಜೀನಾಮೆ

Published

on

ಸುದ್ದಿದಿನ ಡೆಸ್ಕ್: ಮುಜಾಫರ್ ಪುರ ಮಹಿಳಾ ಆಶ್ರಯ ಕೇಂದ್ರದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಮ್ಮ ಪತಿ ತಪ್ಪೊಪ್ಪಿಕೊಂಡ ಬೆನ್ನಿಗೇ ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಸಚಿವೆ ಪತಿ ಚಂದೇಶ್ವರ್ ವರ್ಮಾ ತಾವು ಕೃತ್ಯ ಎಸಗಿರುವುದಾಗಿ ಮುಜಫರ್ ಪುರ ನ್ಯಾಯಾಲಯದಿಂದ ಹೊರ ಬಂದ ನಂತರ ಮಾಧ್ಯಮಗಳ ಮುಂದೆ ಹೇಳಿದ್ದು, ಇದರ ಹಿಂದೆಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಜು ವರ್ಮಾ ಜತೆ ಮಾತುಕತೆ ನಡೆಸಿದರು.
ಇದಾದ ಕೆಲ ಹೊತ್ತಿಗೆ ವರ್ಮಾ ಅವರು ತಮ್ಮ ರಾಜೀನಾಮೆ ಸಲ್ಲಿಸಿದರು.

ಮುಜಫರ್ ಪುರ ಮಹಿಳಾ ಪುನರ್ ವಸತಿ ಕೇಂದ್ರದಲ್ಲಿ ಯುವತಿಯೊಬ್ಬಳ ಮೇಲೆ ಚಂದೇಶ್ವರ್ ಅವರು ಹದಿನೇಳು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Trending

Exit mobile version