ದಿನದ ಸುದ್ದಿ
ದ್ವಿಚಕ್ರ ವಾಹನ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ..!
ಸುದ್ದಿದಿನ ಡೆಸ್ಕ್ :ದ್ವಿಚಕ್ರ ವಾಹನ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ಭಾರತೀಯ ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳ ಜೊತೆ ಸಭೆಯ ವೇಳೆ ದ್ವಿಚಕ್ರ ವಾಹನಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಇದನ್ನು ಇಳಿಸಬೇಕು ಎಂದು ಹಣಕಾಸು ಸಚಿವರಿಗೆ ಸಲಹೆ ನೀಡಲಾಯಿತು. ಇದಕ್ಕೆ ಸ್ಪಂದಿಸಿದ ನಿರ್ಮಲಾ ಸೀತಾರಾಮನ್, ದ್ವಿಚಕ್ರ ವಾಹನವು ಐಷಾರಾಮಿ ಅಥವಾ ತಂಬಾಕು ಸೇರಿದಂತೆ ಇನ್ನಿತರ ಕೆಡುಕು ಪದಾರ್ಥವಲ್ಲ. ಹೀಗಾಗಿ, ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243