ದಿನದ ಸುದ್ದಿ

ಪ್ರಧಾನಿ ನರೇಂದ್ರ ಮೋದಿ – ಯೂರೋಪ್ ಒಕ್ಕೂಟದ ಅಧ್ಯಕ್ಷೆ ಉರ‍್ಸುಲ್ ವಾನ್ ಡೆರ್ ಲೇಯೆನ್ ದ್ವಿಪಕ್ಷೀಯ ಮಾತುಕತೆ

Published

on

ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಯೂರೋಪ್ ಒಕ್ಕೂಟದ ಅಧ್ಯಕ್ಷೆ ಉರ‍್ಸುಲ್ ವಾನ್ ಡೆರ್ ಲೇಯೆನ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು.

ಇದರ ಜತೆಗೆ ವ್ಯಾಪಾರ, ಹವಾಮಾನ ಬದಲಾವಣೆ, ಡಿಜಿಟಲ್ ತಂತ್ರಜ್ಞಾನ ಕುರಿತಂತೆ ಒಕ್ಕೂಟ ದೇಶಗಳ ನಾಯಕರು ಸಮಾಲೋಚನೆ ನಡೆಸಿದರು. ಭಾರತ – ಐರೋಪ್ಯ ಒಕ್ಕೂಟದ ನಡುವೆ ರಾಜಕೀಯ ವಲಯದಲ್ಲಿ ಹಾಗೂ ಉನ್ನತ ಮಟ್ಟದ ವ್ಯಾಪಾರ, ತಂತ್ರಜ್ಞಾನ ಆಯೋಗ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಒಕ್ಕೂಟ ದೇಶಗಳ ನಾಯಕರು ಮಾತುಕತೆ ನಡೆಸಿದರು.

ಹವಾಮಾನ ಬದಲಾವಣೆಯಿಂದಾಗುವ ವೈಪರೀತ್ಯ ಹಾಗೂ ಹಸಿರು ಜಲಜನಕ ಬಳಕೆ ಕುರಿತಂತೆ ದ್ವಿಪಕ್ಷೀಯ ಸಹಕಾರದ ಬಗ್ಗೆಯೂ ಒಕ್ಕೂಟ ದೇಶಗಳ ನಾಯಕರು ಚರ್ಚಿಸಿದರು. ಕೋವಿಡ್ ಸೋಂಕಿನ ನಂತರದ ಸವಾಲುಗಳು ಹಾಗೂ ಕೋವಿಡ್ ನಿಯಂತ್ರಣ ಕುರಿತಂತೆ ಲಸಿಕೆ ಪೂರೈಕೆ ಬಗ್ಗೆಯೂ ಒಕ್ಕೂಟ ದೇಶಗಳ ನಾಯಕರು ಮುಕ್ತ ಸಮಾಲೋಚನೆ ನಡೆಸಿದರು ಎಂದು ವರದಿಯಾಗಿದೆ.

ವ್ಯಾಪಾರ, ತಂತ್ರಜ್ಞಾನ ಹಾಗೂ ಭದ್ರತಾ ವಿಷಯ ಕುರಿತು ವಿದೇಶಾಂಗ ಸಚಿವರೊಂದಿಗೆ ಒಕ್ಕೂಟದ ಅಧ್ಯಕ್ಷೆ ಜತೆ ವಿಸ್ತೃತ ಸಮಾಲೋಚನೆ ನಡೆಸಿದರು. ಭಾರತ ಮತ್ತು ಐರೋಪ್ಯ ಒಕ್ಕೂಟದ ವ್ಯಾಪಾರ, ತಂತ್ರಜ್ಞಾನ ಪರಿಷತ್‌ಅನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಯೂರೋಪ್ – ಭಾರತ ಆರ್ಥಿಕ ಬೆಳವಣಿಗೆ ಸುಸ್ಥಿರ ಅಭಿವೃದ್ಧಿ ಅನುಷ್ಠಾನ ಕುರಿತು ಉಭಯ ದೇಶಗಳ ನಾಯಕರು ಸಮಾಲೋಚನೆ ನಡೆಸಿದರು. ಜಾಗತಿಕ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಂವಾದ ಫಲಪ್ರದವಾಗಿತ್ತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version