ದಿನದ ಸುದ್ದಿ
ಬಿಜೆಪಿ ಸದಾ ರೈತರ ಪರವಾಗಿದೆ : ಸಚಿವ ಅಶ್ವತ್ಥ ನಾರಾಯಣ
ಸುದ್ದಿದಿನ,ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಯಾವಾಗಲೂ ರೈತರ ಪರವಾಗಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು, ಉತ್ತರ ಪ್ರದೇಶದ ಘಟನೆ ಬಗ್ಗೆ ಅಲ್ಲಿನ ಸರ್ಕಾರವು ಸೂಕ್ತ ಕ್ರಮ ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಘಟನೆ ನಡೆಯಬಾರದಿತ್ತು, ಆದರೀಗ ಸರ್ಕಾರ ಎಲ್ಲ ಕ್ರಮವಹಿಸಿ ಎಲ್ಲವನ್ನು ತಿಳಿಗೊಳಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ರೈತರು ಸಬಲೀಕರಣ ಆಗಬಾರದು, ಅವರು ಉನ್ನತಿ ಹೊಂದಬಾರದು, ಬಲಿಷ್ಠರಾಗಬಾರದು, ಅಸಹಾಯಕಾರಾಗಬೇಕು ಎನ್ನುವುದು ಕಾಂಗ್ರೆಸ್ ನವರ ಕಲ್ಪನೆ. ಅವರು ಕಲ್ಪನೆ ಇಟ್ಟು ರಾಜಕೀಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಅನ್ನದಾತರ ಕುಟುಂಬಕ್ಕೆ ಸೇರಿದವರು, ಅವರ ಶಕ್ತಿ ಹೆಚ್ಚಿಸಲು ಸುಧಾರಣೆಗಳು ರೈತರ ಪೂರಕವಾಗಿವೆ. ಇದೇಲ್ಲಾ ಕುತಂತ್ರ, ತಂತ್ರಗಾರಿಕೆಯನ್ನು, ದಾರಿ ತಪ್ಪಿಸುವ ಪ್ರಯತ್ನವನ್ನು ಪ್ರತಿಪಕ್ಷ ಮತ್ತು ಕೆಲವು ಸಂಘಟನೆಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243