ರಾಜಕೀಯ
ಗುಲಾಮರಾಗಬೇಕಾಗುತ್ತದೆ ಎಚ್ಚರ..!
- ಬಿಂದು ಗೌಡ, ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ
ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ತುಳಿದು ಹೇಗೋ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದು ಆಯ್ತು …ಮುಂದೆ ?? ಎಲ್ಲವನ್ನೂ ತಮ್ಮ ಮುಷ್ಟಿಯಲ್ಲಿ ಹಿಡಿದು ತಮ್ಮ ಕೈ ಗೊಂಬೆ ಮಾಡಿಕೊಂಡು ಕುಣಿಸುವ ಆಸೆ ಅದು ಈಗ ಕನ್ನಡಿಗರ ಮೇಲೆ ಪ್ರಯೋಗವಾಗುತ್ತಿದೆ !!
ನಾಡ ಧ್ವಜದಿಂದ ಹಿಡಿದು ಟಿಪ್ಪು ಸುಲ್ತಾನ್ ಜಯಂತಿ , ಇಂದಿರಾ ಕ್ಯಾಂಟೀನ್ ಮರು ನಾಮಕರಣ , ಕನಕಪುರ ಮೆಡಿಕಲ್ ಕಾಲೇಜು , ಕೆಂಪೇಗೌಡ ಅಧ್ಯಯನ ಕೇಂದ್ರದ ಅನುದಾನ ಎಲ್ಲದರಲ್ಲೂ ಬಿಜೆಪಿ ತನ್ನ ದ್ವೇಷದ ರಾಜಕಾರಣವನ್ನಾ ಮಾಡುತ್ತಿರುವುದು ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಭಾಸವಾಗುತ್ತಿದೆ.
ಜನಪರ ಯೋಜನೆಗಳನ್ನು, ಜನಪರ ಕಾರ್ಯಗಳನ್ನು, ಅನುದಾನಗಳನ್ನು ಮೊಟಕುಗೊಳಿಸಿ ತನ್ನ ಹಿಡಿತವನ್ನು ಸಾಧಿಸಿದ ಬಿಜೆಪಿ ಈಗ ನಮ್ಮ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಸಂವಿಧಾನಕ್ಕೆ ಮಾರಕ ಪ್ರಜಾಪ್ರಭುತ್ವದ ಹೆಣ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ.
CAA NRC ವಿರುದ್ಧ ಹೋರಾಟ ಮಾಡಲು ಬೀದಿಗೆ ಇಳಿದರೆ 144 SEC ಹಾಕುವುದು ಯಾವ ನ್ಯಾಯ ?? ಹಾಗಾದ್ರೆ ಸರ್ಕಾರದ ವಿರುದ್ಧ ಪ್ರತಿಭಟಿಸುವ ಹಕ್ಕು ಪ್ರಜೆಗಳಿಗೆ ಇಲ್ಲವೇ ??
ಈ ಹಿನ್ನಲೆ ಗೋಲಿಬಾರ್ ಹೆಸರಿನಲ್ಲಿ ಇಬ್ಬರು ಪ್ರಾಣ ಬಲಿಯಾಯಿತು. ಈ ಸಾವಿಗೆ ನ್ಯಾಯ ಸಿಗುವುದೇ ? ಉಹು ಇಲ್ಲ ಯಾಕಂದ್ರೆ ಸತ್ತವರ ಮೇಲೆ ಎಫ್ ಐ ಆರ್ ಹಾಕಿದಂತ ಮೂರ್ಖ ಸರ್ಕಾರ ಇದು.
ಇದೀಗ ಕಾಲೇಜು ವಿದ್ಯಾರ್ಥಿಗಳು CAA NRC ವಿರುದ್ಧ ಪ್ರಶ್ನೆ ಮಾಡಿದ್ರೆ ನಮ್ಮ ರಾಜ್ಯದ ಉಪ ಮುಖ್ಯಮಂತ್ರಿ ಎನಿಸಿಕೊಂಡಿರುವ ಅಸ್ವಸ್ಥ ಅಶ್ವಥ್ ನಾರಾಯಣ ಅವರು “ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡುವ ಹಕ್ಕು ಕೊಟ್ಟವರು ಯಾರು ” ಎಂದು ರಾಜ ರೋಶವಾಗಿ ಮಾಧ್ಯಮದ ಮುಂದೆ ಕೂತು ಹೇಳುತ್ತಾರೆ ಅಂದರೆ ಎಂತಹ ಮೂರ್ಖರಿಗೆ ನಾವು ರಾಜ್ಯವನ್ನ ಆಳುವುದಕ್ಕೆ ಕೊಟ್ಟಿದ್ದೇವೆ ಎಂದು ಅಸಹ್ಯವಾಗುತ್ತದೆ.
ನಾವೀಗ ಅಂದರೆ ಪ್ರಜಾಪ್ರಭುತ್ವವನ್ನು , ಜಾತ್ಯಾತೀತವನ್ನೂ , ಸಂವಿಧಾನವನ್ನು ಯಾರು ಗೌರವಿಸುತ್ತಾರೋ ಅವರು ಪ್ರಸ್ತುತ ಸರ್ಕಾರದ ಹಿಟ್ಲರ್ ಆಡಳಿತವನ್ನು ವಿರೋಧಿಸದೆ , ಪ್ರತಿಭಟಿಸದೇ ಹೋದರೆ ಮುಂದೆ ಸಂವಿಧಾನದ ಹೆಣವನ್ನು ಹೊರಲು ಸಿದ್ಧರಾಗಿರಬೇಕು. ಪ್ರಜಾಪ್ರಭುತ್ವ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂಬುದನ್ನ ಮನದಟ್ಟು ಮಾಡಿಕೊಳ್ಳಬೇಕು ಇಲ್ಲವಾದರೆ ನಾವು ಮತ್ತದೇ ಮನುವಾದಿಗಳ , ಪುರೋಹಿತಶಾಹಿಗಳ ಗುಲಾಮರಾಗಬೇಕಾಗುತ್ತದೆ ಎಚ್ಚರ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243