/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಕೊನೆ ಕ್ಷಣದಲ್ಲಿ ‘ಕೈ’ ಕೊಟ್ಟ ಬಿಜೆಪಿ‌ ಅಭ್ಯರ್ಥಿ ಚಂದ್ರ‌ಶೇಖರ್ : ಬಿಜೆಪಿ‌ ಕಾರ್ಯಕರ್ತರ ಆಕ್ರೋಶ

Published

on

ಸುದ್ದಿದಿನ ಡೆಸ್ಕ್ : ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಕಾರಣ ಬಿಜೆಪಿ ಕಚೇರಿಯಲ್ಲಿ ಆಕ್ರೋಶಗೊಂಡಿದ್ದಾರೆ ಬಿಜೆಪಿ ಕಾರ್ಯಕರ್ತರು.ಈಗ ಕಮಲ ಪಾಳೆಯದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.

ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ವಿರುದ್ಧ ಅಸಮಾಧಾನಗೊಂಡಿರುವ ಚಂದ್ರಶೇಖರ್ ಕೊನೆ ಕ್ಷಣದಲ್ಲಿ ಚಂದ್ರಶೇಖರ್ ಬೆನ್ನಿಗೆ ನಿಲ್ಲದ ಯೋಗೇಶ್ವರ್ ‌ಚುನಾವಣಾ ಜವಾಬ್ದಾರಿ ನೋಡಿಕೊಳ್ಳುತ್ತೇನೆ ಎಂದಿದ್ದರು. ಚಂದ್ರಶೇಖರ್ ಗೆ ಹಣ ಸಹಾಯ ಮಾಡ್ತೀನಿ ಎಂದಿದ್ದರು ಮಾಜಿ ಶಾಸಕ. ಮತದಾನಕ್ಕೆ ಇನ್ನೆರಡು ದಿನ ಬಾಕಿಯಿರುವಾಗ ಯೋಗೇಶ್ವರ್ ನಾಟ್ ರೀಚೆಬಲ್ ಆದ ಕಾರಣ ಯೋಗೇಶ್ವರ್ ನಡೆಯಿಂದ ಕಣದಿಂದ ಹಿಂದೆ ಸರಿದಿದ್ದಾರೆ ಚಂದ್ರಶೇಖರ್.

ಇದೇ ವಿಚಾರಕ್ಕೆ ಬೇಸರಗೊಂಡು ನೆನ್ನೆ ಚುನಾವಣಾ ಪ್ರಚಾರ ನಡೆಸಿರಲಿಲ್ಲ ಚಂದ್ರಶೇಖರ್. ಯಡಿಯೂರಪ್ಪ, ಸದಾನಂದಗೌಡ ಬಳಿ ಚುನಾವಣಾ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದಿದ್ದ ಯೋಗೇಶ್ವರ್ ಈಗ ಕೈ ಕೊಟ್ಟಿರುವುದು ಬಿಜೆಪಿ ಪಾಳಯದಲ್ಲಿ ಭಯ ಹುಟ್ಟಿಸಿದೆ.‌ಕೈ-ತೆನೆ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಗೆ ಪ್ರಬಲ ಪೈಪೋಟಿ ಒಡ್ಡಿದ್ದರು ಚಂದ್ರಶೇಖರ್. ಆದರೆ ಅವರೇ ಚುನಾವಣಾ ಕಣದಿಂದ ಹೊರಕ್ಕೆ ಸರಿದಿದ್ದಾರೆ.

ಈ‌ ಹಿನ್ನೆಲೆ ಚಂದ್ರಶೇಖರ್ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದ ಬಿಜೆಪಿ ಕಾರ್ಯಕರ್ತರು,
ಮೋದಿ ಪರ ಘೋಷಣೆ ಕೂಗುತ್ತಾ ರಾಮನಗರ ಬಿಜೆಪಿ ಕಚೇರಿ ಎದುರು ಮೋಸಗಾರ ಎಂದು ಚಂದ್ರಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version