ರಾಜಕೀಯ

ಮೋದಿ ಮತ್ತೆ ಪ್ರಧಾನಿ ಆದರೆ ‘ಸಂವಿಧಾನ ಬದಲಾಯಿಸುತ್ತೇವೆ’ : ಬಿಜೆಪಿ‌ ಶಾಸಕ ಯತ್ನಾಳ್ ರ ದೇಶ ದ್ರೋಹಿ ಹೇಳಿಕೆ

Published

on

ಸುದ್ದಿದಿನ, ವಿಜಯಪುರ : ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ನಾವು ಸಂವಿಧಾನ ಬದಲಾಯಿಸುತ್ತೇವೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಈ ಸಲವೂ ಲೋಕಸಭಾ ಚುನಾವಣೆಯಲ್ಲಿ ಮೋದಿಯವರೇ ಗೆಲ್ಲಲಿದ್ದಾರೆ. ಹಾಗೆ ಪ್ರಧಾನಿಯೂ ಆಗಲಿದ್ದು, ಆಗ ನಾವು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ದೇಶದ್ರೋಹಿ ಹೇಳಿಕೆ ನೀಡಿದ್ದಾರೆ.

ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಮನ್ ಸಿವಿಲ್ ಕೋಡ್ ಜಾರಿ ಮಾಡುವುದರ ಮೂಲಕ ಎಲ್ಲರಿಗೂ ಒಂದೇ ಕಾನೂನು ಜಾರಗೆ ತರಲಾಗುತ್ತದೆ. ಎಲ್ಲರೂ ಒಂದೇ ಮದುವೆಯಾಗಬೇಕು, ಎರಡೇ ಮಕ್ಕಳು ಪಡೆಯ ಬೇಕೆಂಬ ನಿಯಮ ಮಾಡುತ್ತೇವೆ. ಕಾಶ್ಮೀರಕ್ಕೆ ನೀಡಲಾಗಿರುವ 370 ನೇ ವಿಧಿ ತೆಗೆದು ಹಾಕುವದರ ಮೂಲಕ ಸಮಾನ ನಾಗರಿಕ ಸಂಹಿತೆ ತರಲಾಗುವುದು ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ.

ರಾಮ ಮಂದಿರವನ್ನು ಅಯ್ಯೋಧ್ಯೆಯಲ್ಲಿ ನಿರ್ಮಿಸುತ್ತೇವೆ. ಹಾಗೇ ಕಾಶಿ ವಿಶ್ವನಾಥ ದೇವಾಲಯವನ್ನು ಪುನಃ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version