/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಹರ್ ಬೂತ್ ದಸ್ ಯೂತ್; ಗೆಲುವಿಗೆ ಬಿಜೆಪಿ ಸೂತ್ರ

Published

on

ಸುದ್ದಿದಿನ ಡೆಸ್ಕ್: ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ `ಟಿ20 ಸೂತ್ರ’ ರೂಪಿಸಿದ್ದು, ಈಮ ಸೂತ್ರದಂತೆ ಪ್ರತಿ ಕಾರ್ಯಕರ್ತ ತನ್ನ ವ್ಯಾಪ್ತಿಯ 20 ಮನೆಗಳಿಗೆ ಭೇಟಿ ನೀಡಿ, ಮೋದಿ ಸರ್ಕಾರದ ಸಾಧನೆಗಳ ಮಾಹಿತಿ ನೀಡಬೇಕು. `ಟಿ20 ಸೂತ್ರ’ ಜತೆಗೆ `ಹರ್ ಬೂತ್ ದಸ್ ಯೂತ್’ (ಪ್ರತಿ ಬೂತ್ಗೆ ಹತ್ತು ಯುವಕರು) ಸೂತ್ರವನ್ನು ರೂಪಿಸಿಕೊಂಡಿದೆ. ಯುವಸಮೂಹ ನಮೋ ಆ್ಯಪ್ ಅಡಿ ಕಾರ್ಯನಿರ್ವಹಿಸುತ್ತವೆ ಎಂದು ಪಕ್ಷದ ಮೂಲ ತಿಳಿಸಿದೆ.

ಪಕ್ಷದ ಕಾರ್ಯಕರ್ತರು ತಮ್ಮ ಪ್ರದೇಶದಲ್ಲಿರುವ ಕನಿಷ್ಟ ಕನಿಷ್ಠ 20 ಮನೆಗಳಿಗಾದರೂ ಭೇಟಿ ನೀಡಿ ಮೋದಿ ಸರ್ಕಾರದ ಸಾಧನೆ ಪ್ರಚುರ ಪಡಿಸಬೇಕು. ನಮೋ ಆ್ಯಪ್.ಗೆ ಕನಿಷ್ಟ ನೂರು ಜನರನ್ನೂ ಸೇರಿಸಬೇಕು. ಈ ಮೂಲಕ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಡಿಜಿಟಲ್ ಮತ್ತು ಮನೆ ಮನೆ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಮೋ ಆ್ಯಪ್ ಮೂಲಕ ಪ್ರಚಾರದ ವಿಧಾನ, ಸರ್ಕಾರದ ಸಾಧನೆಗಳನ್ನು ತಿಳಿಸುವ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Trending

Exit mobile version