ರಾಜಕೀಯ

ಶಿವಮೊಗ್ಗ ಬಿಜೆಪಿಗೆ ಬೆಳಕಿನ ಹಬ್ಬದ ಸಂಭ್ರಮ ತಂದ ರುದ್ರೇಗೌಡ್ರ ನಾಯಕತ್ವ

Published

on

ಸುದ್ದಿದಿನ ಡೆಸ್ಕ್ : ಸಚ್ಚಾರಿತ್ರ್ಯ,ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣದಲ್ಲಿ ಅಪರೂಪದ ಹೆಸರಾಗಿ ಗುರುತಿಸಿ ಗೌರವಿಸಲ್ಪಡುವ ಹೆಸರು. ಶಿವಮೊಗ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ್ರುದು. ಸಂಘಟಿತ ಹಾಗೂ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ವ್ಯವಸ್ಥಿತವಾಗಿ ನಿರ್ವಹಿಸುವ ಅವರ ದಕ್ಷ ಕಾರ್ಯವೈಖರಿ ವೈರಿಯೂ ಮೆಚ್ಚಿ ಅಹುದಹುನ್ನೆಂತುವುದು.

ಭಾರತೀಯ ಜನತಾ ಪಕ್ಷದ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದ ತರುವಾಯ ಆಂತರಿಕ ಸಮಸ್ಯೆಗಳಿಗೆ ಅಧಿಕಾರ ವಿಕೇಂದ್ರಿಕರಣದ ಜೊತೆ ಎಲ್ಲರೊಟ್ಟಿಗೆ ಚರ್ಚಿಸಿ ಎಲ್ಲರನ್ನೂ ಸಮಾನವಾಗಿ ಕರೆದೊಯ್ಯುವು ಮೂಲಕ ಉತ್ತರ ನೀಡಿ ಎಲ್ಲರಿಂದಲೂ ಗೌರವಾಧರಕ್ಕೆ ಪಾತ್ರವಾಗುವುದು ಅಷ್ಟು ಸುಲಭವಲ್ಲ.ಪ್ರಚಾರ ಬಯಸದೇ ನಾಯಕರು ಹೇಳಿದ ಅಷ್ಟು ಕಾರ್ಯತಂತ್ರಗಳನ್ನು ತಳಮಟ್ಟದಲ್ಲಿ ಸಾದರಪಡಿಸುವ ಅವರ ಪಕ್ಷ ಕರ್ತವ್ಯ ನಿಷ್ಠೆ ಎಲ್ಲರಿಗೂ ಮಾದರಿ. ನಿತ್ಯವೂ ಆರ್ ಎಸ್ ಎಸ್ ನಾಯಕರೊಡನೆ ಚರ್ಚಿಸುವ ,ಅಗತ್ಯ ಸಲಹೆ ,ಸಹಕಾರ ಕೇಳಲು ಕಾರ್ಯಕರ್ತರ ಮನೆಯ ಬಾಗಿಲಿಗೆ ಹೋಗುವ ಅವರ ಸರಳತೆಗೆ ವಿಜಯಲಕ್ಷ್ಮಿ ಒಲಿಯುವುದರಲ್ಲಿ ಎಡವಿಯೇ ಇಲ್ಲ.

ಅವರ ನೇತೃತ್ವದಿ ಜರುಗಿದ ವಿಧಾನ ಸಭಾ ಚುನಾವಣೆಯಲ್ಲಿ 7 ಜನ ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಬಿಜೆಪಿಯ ಭದ್ರಾಕೋಟೆಯನ್ನಾಗಿಸಿದ್ದು,
ಪದವೀಧರರು ವಿಧಾನ ಪರಿಷತ್ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ರವರನ್ನು ಗೆಲ್ಲಿಸಲು ರಣತಂತ್ರರೂಪಿಸಿ ಗೆಲುವಿನ ಗೆರೆ ದಾಟಿಸಿದ್ದು ಮೊನ್ನೆಯ ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸರ್ಕಾರವೇ ಶಿವಮೊಗ್ಗದಲ್ಲಿ ಬೀಡುಬಿಟ್ಟು ಹಣದ ಹೊಳೆ ಹರಿಸಿದರೂ ಎಸ್.ರುದ್ರೇಗೌಡ್ರ ಸರ್ವ ಸಮಾಜಗಳನ್ನು ಸಂಪರ್ಕಿಸುವ ಸಂಪರ್ಕ ಅಭಿಯಾನ ಕಾರ್ಯಕ್ಕೆ ಮಂಡಿಯೂರ ಬೇಕಾಯಿತು.

ಕೈಗಾರಿಕಾ ಉದ್ಯಮಿಗಳಾಗಿ ಸಾವಿರಾರು ಜನರ ಬಧುಕಿಗೆ ಆಸರೆಯಾಗಿ,ಮನೆಗೆ ಬಂದವರನ್ನು ಸೌಜನ್ಯತೆ ಮತ್ತು ಗೌರವದಿಂದ ಕಾಣುವ ಸಂಸ್ಕೃತಿಗೆ ಎಲ್ಲರೂ ಫೀದಾ ಆಗಲೇಬೇಕು.ರಾಜಕಾರಣ ಮತ್ತು ಅಧಿಕಾರ ಸೇವೆಗೆ ಮೀಸಲು ಎಂದೇ ತಿರ್ಮಾನಿಸಿರುವ ಅವರು ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರಿಗೆ ತಮ್ಮ ಯೋಚನೆಗಳನ್ನು ಸ್ಪಷ್ಟಪಡಿಸಿ ರಣತಂತ್ರರೂಪಿಸುವ ಅವರ ವೈಖರಿಗೆ ಬೆರಗಾಗಿ ಯಡಿಯೂರಪ್ಪನವರೇ ಪ್ರಶ್ನೆ ಮಾಡದೇ ಒಪ್ಪಿರುವ ಹಲವಾರು ಉದಾಹರಣೆಗಳು ಇವೆ. ಹಮ್ಮು,ಬಿಮ್ಮು ತೋರದೆ, ಸರ್ವರನ್ನೂ ಜೊತೆಯಲ್ಲಿ ಕರೆದೊಯ್ದು ಪ್ರೀತಿಯಿಂದ ಕೆಲಸ ತೆಗೆದುಕೊಳ್ಳುವ ಅವರ ಹೃದಯ ಮತ್ತು ಕಾರ್ಯತತ್ಪರತೆಯ ಭದ್ರತೆಯಲ್ಲಿ ಶಿವಮೊಗ್ಗ ಬಿಜೆಪಿ ಭದ್ರತೆಗೆ ಯಾವ ಹಣ,ಅಧಿಕಾರ, ಹೆಂಡ,ಆಮಿಷದಿಂದ ಅಲುಗಾಡಿಸಲು ಸಾಧ್ಯವೇ ಇಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version