ದಿನದ ಸುದ್ದಿ

ರೈತರ ಬಗ್ಗೆ ಬಿಜೆಪಿಯವರು ಮೊಸಳೆ ಕಣ್ಣೀರು ಹಾಕೋದು ಬೇಡ : ಜಿ.ಪರಮೇಶ್ವರ್

Published

on

ಸುದ್ದಿದಿನ,ತುಮಕೂರು : ಕೇಂದ್ರ ಸರ್ಕಾರ ನಿಗದಿಪಡಿಸೋ ಎಫ್.ಆರ್.ಪಿ ಬೆಲೆ ಏರುಪೇರಾಗುತ್ತೆ.‌ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ‌ಬೆಲೆ ನಿಗದಿಪಡಿಸುತ್ತಾರೆ.‌‌ಕೆಲವು ಸಂದರ್ಭ ಎಫ್.ಆರ್.ಪಿ ಬೆಲೆಗಿಂತಾ ಹೆಚ್ಚು ಸಿಗುತ್ತೆ, ಕಡಿಮೆಯೂ ಸಿಗುತ್ತೆ. ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳೋದಿಲ್ಲ. ರೈತರಿಗೆ ಸಹಾಯ ಮಾಡೋಕೆ ಅಂತಾ ಕಾರ್ಖಾನೆಗಳಿಗೆ ಸರ್ಕಾರ ಹಣ ನೀಡಿದೆ ಎಂದು ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರವಾಗಿ ತುಮಕೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ‌ ನೀಡಿದ್ದಾರೆ.

ಕಳೆದ ಬಾರಿ‌ ಸಿದ್ದರಾಮಯ್ಯ ಅವ್ರು 450 ರೂಪಾಯಿ ಬೆಂಬಲ ನೀಡಿದ್ದಾರೆ. 2017-18 ನಡೆದ ಒಪ್ಪಂದದ ಹಣ ಕೊಟಿಲ್ಲ ಅಂತಾ ರೈತರು ಪ್ರತಿಭಟನೆ ನಡೆಸಿದ್ದಾರೆ‌‌‌‌‌. ಸರ್ಕಾರ ಈಗಾಗಲೇ ರೈತರೊಂದಿಗೆ, ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುವುದು.ಕೇಂದ್ರ ಸರ್ಕಾರ ದರ ನಿಗದಿಪಡಿಸೋದ್ರಿಂದ ಅವರು ಸ್ಪಂದಿಸಬೇಕಿದೆ ಎಂದು ಹೇಳಿದ್ದಾರೆ.

ಬಿಜೆಪಿಗೆ ರೈತರ ಬಗ್ಗೆ ಮಾತನಾಡೋ ಯಾವುದೇ ನೈತಿಕತೆ ಇಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕೋದು ಬೇಡ. ರಾಜ್ಯದ ರೈತರ ಸಮಸ್ಯೆ ಅಂತಾ ಕೇಂದ್ರಕ್ಕೆ ಹೋದಾಗ ಯಾವುದೇ ರೀತಿ ಸ್ಪಂಧಿಸಿಲ್ಲ. ರಾಜಕೀಯಕ್ಕಾಗಿ ರೈತರ ಪರವಾಗಿ ಮಾತಾಡ್ತಾರೆ ಡಾ.ಜಿ.ಪರಮೇಶ್ವರ್ ಗುಡುಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version