ದಿನದ ಸುದ್ದಿ
ಲೋಕಸಭೆ ಚುನಣವಣೆ ಗೆ ಸಿದ್ಧತೆಯ ರಣಕಹಳೆ ಮೊಳಗಿಸಿದ ರಾಜ್ಯ ಬಿಜೆಪಿ ಪಡೆ
ಸುದ್ದಿದಿನ ಡೆಸ್ಕ್
ಮುಂಬರುವ ಲೋಕಸಭೆ ಚುನಣವಣೆಗೆ ಸಿದ್ಧವಾಗಲು ರಾಜ್ಯ ಬಿಜೆಪಿ ಪಡೆ ರಣಕಹಳೆ ಮೊಳಗಿಸಿದ್ದು, ಇಂದಿನಿಂದ ಬಿಜೆಪಿಯ ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದೆ. ಶುಕ್ರವಾರ ಆರಂಭವಾಗುವ ಕಮಲ ಪಡೆಯ ಯಾತ್ರೆ ಆಗಸ್ಟ್ ೧೬ರಂದು ಮುಕ್ತಾಯಗೊಳಲಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ನೇತೃತ್ವದ ಮೂರು ತಂಡಗಳು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಸಮ್ಮಿಶ್ರ ಸರ್ಕಾರ ಜಾರಿಯಾದ ನಂತ್ರ ಮೊದಲ ಬಾರಿ ಬಿಜೆಪಿ ಅತಿ ದೊಡ್ಡ ಪ್ರವಾಸ ಇದಾಗಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಕುರಿತು ಆಡಳಿತ ವಿರೋಧಿ ಅಲೆ ಎಷ್ಟಿದೆ ಅನ್ನೋಕೆ ತಂಡದ ಮಾಹಿತಿ ಸಂಗ್ರಹಿಸಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕುರಿತು ರಾಜ್ಯದ ಜನರಿಗೆ ಆಗುತ್ತಿರುವ ಸಮಸ್ಯೆ ಗಳ ಪಟ್ಟಿ ಮಾಡಲಿದೆ. ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಿಪರೇಷನ್ ಟೂರ್ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401