ದಿನದ ಸುದ್ದಿ

ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಿದ ಉಗ್ರರು

Published

on

ಸುದ್ದಿದಿನ ಡೆಸ್ಕ್: ದೇಶದಲ್ಲಿ ಉಗ್ರರ ಉಪಟಳ ಮತ್ತೆ ಮುಂದುವರಿದಿದೆ. ಉಗ್ರರು ಬಿಜೆಪಿ ಕಾರ್ಯಕರ್ತನ‌ ಬಲಿ ತೆಗೆದುಕೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಿನ್ನೆ ರಾತ್ರಿ 2-30 ಸುಮಾರಿಗೆ ಬಿಜೆಪಿ ಕಾರ್ಯಕರ್ತ ಶಬೀರ್ ಅಹ್ಮದ್ ಭಟ್
ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪುಲ್ವಾಮಾದಲ್ಲಿರುವ ಶಬೀರ್ ಅಹ್ಮದ್ ಭಟ್ ಅವರ ನಿವಾಸದಲ್ಲೇ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಗ್ರರರ ಹಾವಳಿ ಹೆಚ್ಚಾಗಿದ್ದು, ಅನೇಕ ದಾಳಿಗಳು ನಡೆಯುತ್ತಾ ಬಂದಿವೆ. ಇದಕ್ಕೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡುತ್ತಿದ್ದರೂ ಉಗ್ರರ ಉಪಟಳ ಕಡಿಮೆ ಆಗಿಲ್ಲ.

Web title: bjp worker killed by terror attack on jammu and kashmir

Leave a Reply

Your email address will not be published. Required fields are marked *

Trending

Exit mobile version