ರಾಜಕೀಯ
ಬಾದಾಮಿಯಲ್ಲಿ ಸ್ಪರ್ಧಿಸಿ, ಅಲ್ಪಮತದಲ್ಲಿ ಗೆದ್ದು ಸಿದ್ದರಾಮಯ್ಯ ಮರ್ಯಾದೆ ಉಳಿಸಿಕೊಂಡಿದ್ದಾರೆ : ಬಿ.ಎಸ್.ವೈ ವ್ಯಂಗ್ಯ
ಸುದ್ದಿದಿನ ಡೆಸ್ಕ್ : ಮದ್ದೂರು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರಿಂದ ಬಾರಿ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿದರು. ಪಟ್ಟಣದ ನಗರಕೆರೆ ವೃತ್ತದ ಬಳಿ ಬಿಜೆಪಿ ಭಾರಿ ಬಹಿರಂಗ ಸಭೆಯನ್ನುದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ
ಅಧಿಕಾರಕ್ಕೆ ಬಂದ ದಿನದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳೇ ಕುಂಠಿತಗೊಳ್ಳುತ್ತಿವೆ ರೈತರ ಆತ್ಮಹತ್ಯೆಗಳು ಹೆಚ್ಚಳವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆರೋಪಿಸಿದರು ಜಿಲ್ಲೆಯ ಜನ ಬದಲಾವಣೆ ಬಯಸುತ್ತಿದ್ದು ನರೇಂದ್ರ ಮೋದಿಯವರ ನಾಲ್ಕುವರೆ ವರ್ಷಗಳ ಉತ್ತಮ ಆಡಳಿತವನ್ನು ಕಂಡು ಬಿಜೆಪಿ ಪಕ್ಷವನ್ನು ಜಿಲ್ಲೆಯ ಜನ ಬೆಂಬಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಭಾವ ಗೊಳಿಸಿರುವ ಶನಿ ರಾಹು ಕೇತು ಒಂದಾಗಿದ್ದು ಬಾದಾಮಿಯಲ್ಲಿ ಸ್ಪರ್ಧಿಸಿ ಸ್ವಲ್ಪ ಅಂತರದಿಂದ ಗೆದ್ದು ತಮ್ಮ ಮರ್ಯಾದೆ ಉಳಿಸಿಕೊಂಡಿದ್ದಾರೆಂದು ದೂರಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಮುಖಂಡರು ಪಕ್ಷದ ಅಭ್ಯರ್ಥಿ ಶಿವರಾಮೇಗೌಡ ಪರ ಮತಯಾಚನೆ ಮಾಡುತ್ತಿಲ್ಲವೆಂದು ತಿಳಿಸಿದರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡು ಆರು ತಿಂಗಳು ಕಳೆದರೂ ರೈತರ ಸಾಲ ಮನ್ನಾ ಮಾಡದೆ ಹಾಗೂ ಅಭಿವೃದ್ಧಿಯ ಕೈಗೊಳ್ಳದೇ ಜನರನ್ನು ವಂಚಿಸುತ್ತಿದ್ದಾರೆಂದು ಆರೋಪಿಸಿದರು.
ಚುನಾವಣೆಯನ್ನು ಹಣಬಲದಿಂದ ಜಾತಿ ವಿಷ ಬೀಜ ಬಿತ್ತುವ ಮೂಲಕ ಚುನಾವಣೆ ಗೆಲ್ಲಬಹುದೆಂದು ಹಗಲು ಕನಸು ಕಾಣುತ್ತಿರುವ ಸಮ್ಮಿಶ್ರ ಸರ್ಕಾರದ ಮುಖಂಡರಿಗೆ ಜಿಲ್ಲೆಯ ಜನರೇ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ತಿಳಿಸಿದರು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಜಾತಿ ಭೇದ ಮರೆತು ಎಲ್ಲಾ ಜನಾಂಗದವರಿಗೂ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಮೈಷುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಹಜ್ ಭವನ ಭಾಗ್ಯಲಕ್ಷ್ಮಿ ಯೋಜನೆ ವಾಲ್ಮೀಕಿ ಭವನ ಸೇರಿದಂತೆ ಜಿಲ್ಲೆಗೆ ಸಾವಿರಾರು ಕೋಟಿ ರು ಅನುದಾನ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದರು ಇತ್ತಿಚೆಗೆ ನಡೆದ ಸರ್ವೆಯಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲ್ಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಆದ್ದರಿಂದ ಈ ಬಾರಿ ಡಾ, ಸಿದ್ದರಾಮಯ್ಯ ರವರನ್ನು ಅತೀ ಹೆಚ್ಚಿನ ಮತಗಳನ್ನು ಕೊಟ್ಟು ಲೋಕಸಭೆಗೆ ಕಳುಹಿಸಿ ಕೊಡುವ ಮೂಲಕ ನರೇಂದ್ರ ಮೋದಿ ಯವರ ಕೈ ಬಲ ಪಡಿಸ ಬೇಕೆಂದು ವಿನಂತಿಸಿ ಕೊಂಡರು.
ಸಭೆಯಲ್ಲಿ ಡಿ.ಎಸ್. ವೀರಯ್ಯ ,ಸಿ.ಟಿ.ರವಿ, ಅಶ್ವಥ್ ನಾರಾಯಣ,ಆರ್.ಅಶೋಕ್, ರಾಜ್ಯ ಎಸ್.ಸಿ.ಮೋರ್ಚಾ ಸಂ.ಕಾ.ಆತ್ಮಾನಂದ , ಕೆಂಪ ಬೋರಯ್ಯ, ರವಿಕುಮಾರ್ , ಅರವಿಂದ್, ಹಾಗೂ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾ|ವಾಟ್ಸಾಪ್|9986715401