ದಿನದ ಸುದ್ದಿ
ದೇಶದ ಗುಲಾಮಗಿರಿಯ ಸಂಕೇತ ಖಾಕಿ ಚೆಡ್ಡಿ : ಬಂಧಿತ ಎನ್ ಎಸ್ ಯು ಐ ಮುಖಂಡರ ಭೇಟಿ ವೇಳೆ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಸುದ್ದಿದಿನ,ತುಮಕೂರು : ಸಚಿವರ ಮನೆ ಎದುರಿ ಪ್ರತಿಭಟನೆ ಮಾಡಿದಕ್ಕೆ ಜೈಲಿನಲ್ಲಿರುವ ಎನ್ ಎಸ್ ಯು ಐ ರಾಜ್ಯ ಅಧ್ಯಕ್ಷ ಕೀರ್ತಿ ಗಣೇಶ್ ಹಾಗೂ ಇತರೆ ಮುಖಂಡರನ್ನ ಇಂದು ಭೇಟಿ ಮಾಡಿದ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರು ತುಮಕೂರು ಜೈಲಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಇದೇ ವೇಳೆ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮಾಧ್ಯಮದವರಿಗೆ ಹೇಳಿಕೆ ನೀಡಿದ ಅವರು, ಚಡ್ಡಿ ಸುಟ್ಟು ಪ್ರತಿಭಟನೆ ಮಾಡಿದಕ್ಕೆ ವಿದ್ಯಾರ್ಥಿ ನಾಯಕರನ್ನ ಅರೆಸ್ಟ್ ಮಾಡಿ ಜೈಲಿನಲ್ಲಿಟ್ಟಿದ್ದಾರೆ. ವಿದ್ಯಾರ್ಥಿ ನಾಯಕರ ಮೇಲೆ ಗೃಹ ಸಚಿವರು ಕಠಿಣ ಕಾನೂನುಗಳನ್ನ ಹಾಕಿಸಿದ್ದಾರೆ. ರಾಜ್ಯದಲ್ಲಿ ಅತ್ಯಂತ ಗಂಭೀರ ಆರೋಪಗಳನ್ನ ಎದುರಿಸುತ್ತಿರುವ ಗೃಹ ಸಚಿವರು, ಗಂಭೀರ ಆರೋಪ ಹೊತ್ತಿದ್ದು, ಅವರನ್ನು ಜೈಲಿಗೆ ಕಳಿಸುವುದು ಸತ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.
ಎಲ್ಲಾ ಕಡೆ ವಿದ್ಯಾರ್ಥಿ ನಾಯಕರ ಮೇಲೆ 307 ಸೆಕ್ಷನ್ ಹಾಕಿ ಜೈಲಿಗೆ ಹಾಕುತ್ತಿದ್ದಾರೆ. ದೇಶದ ಗುಲಾಮಗಿರಿಯ ಸಂಕೇತ ಖಾಕಿ ಚೆಡ್ಡಿ, ಹಾಗೂ ಕರಿ ಟೋಪಿ. ಬ್ರಿಟಿಷರ ಜೊತೆಗೆ ಶಾಮೀಲಾಗಿದ್ದಂತಹ ಚಿಹ್ನೆ, ಅದನ್ನ ಸುಟ್ಟಿರೋದ್ರಲ್ಲಿ ತಪ್ಪಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243