ದಿನದ ಸುದ್ದಿ

ಅಂಧ ಮಕ್ಕಳ ವಸತಿಯುತ ಶಾಲೆಗೆ 1 ರಿಂದ 10 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಯಿಂದ ನಡೆಸಲ್ಪಡುತ್ತಿರುವ ಅಂಧ ಮಕ್ಕಳ ಸರ್ಕಾರಿ ವಸತಿಯುತ ಶಾಲೆಯಲ್ಲಿ 2023-24 ರ ಸಾಲಿಗೆ ಪ್ರವೇಶ ಪಡೆಯಲು 6 ರಿಂದ 18 ವರ್ಷದೊಳಗಿನ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಂದರಿಂದ ಹತ್ತನೇ ತರಗತಿಯವರೆಗೆ ಅಂದ ಹೆಣ್ಣು ಮಕ್ಕಳಿಗೆ ಉಚಿತ ಊಟ, ವಸತಿ ಸೌಲಭ್ಯ ಹಾಗೂ ಗಂಡು ಮಕ್ಕಳಗೆ ವಸತಿ ರಹಿತ ಶಿಕ್ಷಣ ನೀಡಲಾಗುತ್ತಿದ್ದು, 80 ನಿವಾಸಿಗಳಿಗೆ ಅವಕಾಶವಿರುತ್ತದೆ.

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಗರದ ದೇವರಾಜ್ ಅರಸ್ ಬಡಾವಣೆಯ `ಬಿ` ಬ್ಲಾಕ್ ನಲ್ಲಿರುವ ಅಂಧ ಮಕ್ಕಳ ಸರ್ಕಾರಿ ವಸತಿಯುತ ಪಾಠಶಾಲೆ ಅಧೀಕ್ಷಕರನ್ನು ಸಂಪರ್ಕಿಸಿ ಪ್ರವೇಶಾತಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕರಾದ ಗಂಗಾಧರಪ್ಪ ಹೆಚ್.ಎನ್- 9964534883, ಕಾತ್ಯಾಯಿನಿ ಸಿ.ಕೆ-9481358884, ಬಸವರಾಜ್ ಮಾಗಡಿ-9900497393, ಶಿವಾನಂದ ಶೇ ಗುಣಸಿ-8867112890 ಅಥವಾ ಇ-ಮೇಲ್-
blindschooldavanagere@gmail.com ಸಂಪರ್ಕಿಸಲು ಜಿಲ್ಲೆಯ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version