ದಿನದ ಸುದ್ದಿ

ಗಣೇಶ ಹಬ್ಬ : ನವಿಲೇಹಾಳಿನಲ್ಲಿ ‘ಈಶ್ವರ ಯುವಕ ಸಂಘ’ದಿಂದ ರಕ್ತದಾನ ಶಿಬಿರ

Published

on

ಸುದ್ದಿದಿನ, ದಾವಣಗೆರೆ : ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯ, ಚನ್ನಗಿರಿ ತಾಲ್ಲೂಕಿನ ನವಿಲೇಹಾಳು ಗ್ರಾಮದ ‘ ಈಶ್ವರ ಯುವಕ ಸಂಘ’ ದ ನೇತೃತ್ವದಲ್ಲಿ ಇತ್ತೀಚಿಗೆ ‘ಸ್ವಯಂಪ್ರೇರಿತ ರಕ್ತದಾನ ಶಿಬಿರ’ ವನ್ನು ಏರ್ಪಡಿಸಲಾಗಿತ್ತು.

‘ಕರ್ನಾಟಕ ಹಿಮೋಫೀಲಿಯ ಸೊಸೈಟಿ, ದಾವಣಗೆರೆ’ ಲೈಫ್ ‌ಲೈನ್ ರಕ್ತನಿಧಿ ಕೇಂದ್ರ’ದವರು ಈ ಶಿಬಿರದಲ್ಲಿ ರಕ್ತ ದಾನಿಗಳ ರಕ್ತವನ್ನು ತಮ್ಮ ಬ್ಲಡ್ ಬ್ಯಾಂಕ್ ಗೆ ಶೇಖರಿಸಿಕೊಂಡರು.

ಈ ಸಂಘದ ವತಿಯಿಂದ ಎರಡನೇ ಬಾರಿಗೆ ಈ ರಕ್ತದಾನ ಶಿಬಿರವನ್ನು ಏರ್ಪಡಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version