ದಿನದ ಸುದ್ದಿ
ಚನ್ನಗಿರಿ | ರಕ್ತದಾನ ಶಿಬಿರ
ಸುದ್ದಿದಿನ, ಚನ್ನಗಿರಿ : ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಎನ್ ಎಸ್ ಎಸ್, ರೋವರ್ಸ್ ಅಂಡ್ ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಇಂದು (ಗುರುವಾರ) ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಮೃತೇಶ್ವರ ಬಿ.ಜಿ ಅವರು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ರಾಜಪ್ಪ, ಚನ್ನಗಿರಿಯ ಬ್ಲಡ್ ಯೂನಿಟ್ ನ ನೋಡಲ್ ಆಫೀಸರ್ ಹಾಗೂ ದಾವಣಗೆರೆಯ ಬ್ಲಡ್ ಯೂನಿಟ್ ನ ಡಾ.ಚಂದ್ರಪ್ಪ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ, ಪ್ರೊ. ಮಹಮ್ಮದ್ ಖಾನ್, ಐಕ್ಯೂಎಸಿ ಸಂಯೋಜಕರಾದ ಪ್ರೊ ವಿಜಯ್ ಕುಮಾರ್, ಡಾ.ಸತೀಶ್ ಕುಮಾರ್, ಡಾ.ಪಾರ್ವತಮ್ಮ, ಡಾ.ವೇಣುಗೋಪಾಲ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಕಲ್ಲೇಶಪ್ಪ, ಪ್ರೊ. ಲಕ್ಮಣ್, ಉಪನ್ಯಾಸಕ ಮುರಳೀಧರ, ಈಶ್ವರ್ ಬೆಳ್ಳಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243