ದಿನದ ಸುದ್ದಿ

ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ

Published

on

ಸುದ್ದಿದಿನ ಡೆಸ್ಕ್ : ನಿನ್ನೆ ಇಬ್ಬರು ವಿದ್ಯಾರ್ಥಿಗಳನ್ನ ಬಲಿ ಪಡೆದ ಬಿಎಂಟಿಸಿಗೆ ಇಂದು ಮತ್ತೊರ್ವ ಬಲಿಯಾಗಿದ್ದಾನೆ. ಬಿಎಂಟಿಸಿ ಬಸ್ ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ನೋಮನ್ ನೌಷಾದ್ (24)ಮೃತಪಟ್ಟಿದ್ದಾರೆ.

ಮೃತ ನೌಷಾದ್ ವೈಟ್ ಫೀಲ್ಡ್ ನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದರು. ಕೆ.ಆರ್ ಪುರದ ಬಿ ನಾರಾಯಣಪುರ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು, ಬಿಎಂಟಿಸಿ ಚಾಲಕನ ಅತಿ ವೇಗದ ಚಾಲನೆಯೇ ಅಫಘಾತಕ್ಕೆ ಕಾರಣ‌ ಎನ್ನಲಾಗಿದೆ. ಕೆ.ಆರ್ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, Ka-53 F 020 ಸಂಖ್ಯೆಯ ಬಿಎಂಟಿಸಿ ಬಸ್ ನಿಂದ ಅಪಘಾತವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version