ದಿನದ ಸುದ್ದಿ
ದೋಣಿ ದುರಂತ : ಒಂದೇ ಕುಟುಂಬದ 9 ಮಂದಿ ಸಾವು
ಸುದ್ದಿದಿನ, ಹಾವೇರಿ : ಕಾರವಾರದ ಕೊರ್ಮಗಡದಲ್ಲಿ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರು ಗ್ರಾಮದ ಒಂದೇ ಕುಟುಂಬದ 9 ಜನ ಸಾವನ್ನಪ್ಪಿದ್ದ ಹಿನ್ನೆಲೆ ಕುಟುಂಬದ ಸದಸ್ಯರಿಗೆ ಶಿಗ್ಗಾಂವ ಶಾಸಕ ಬಸವರಾಜ ಬೊಮ್ಮಾಯಿ ತಾಲೂಕಿನ ಹೊಸೂರಿನಲ್ಲಿ ಸಾಂತ್ವನ ಹೇಳಿದ್ದಾರೆ.
ಈಗಾಗಲೇ ಏಳು ಜನರು ಮೃತ ದೇಹಗಳು ಪತ್ತೆಯಾಗಿದ್ದು ನಿನ್ನೆ ರಾತ್ರಿ ಸಾಮೂಹಿಕ ಶವ ಸಂಸ್ಕಾರ ಮಾಡಲಾಗಿದೆ. ಇನ್ನೂ ಎರಡು ಮೃತ ದೇಹಗಳ ಪತ್ತೆ ಕಾರ್ಯ ನಡೆದಿದೆ.ಸರ್ಕಾರ ಈಗಾಗಲೇ ಮೃತರಿಗೆ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇದನ್ನು ಐದು ಲಕ್ಷಕ್ಕೆ ಏರಿಸಲು ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದೆನೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ಬೊಮ್ಮಯಿ ಹೇಳಿದ್ದಾರೆ.
ಬದುಕಿ ಬಂದ ಬಾಲಕ ಗಣೇಶ ಶಿಕ್ಷಣದ ಬಗ್ಗೆ ಸರ್ಕಾರದ ಜೊತೆ ಮಾತನಾಡುತ್ತೇನೆ.ಹಾವೇರಿ ಜಿಲ್ಲೆಯಲ್ಲಿಯೇ ಇದು ದೊಡ್ಡ ದುರಂತ. ದೇವರು ಕುಟುಂಬದ ಸದಸ್ಯರಿಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.