ದಿನದ ಸುದ್ದಿ

ವಿಮಾನದಲ್ಲಿ ನವಜಾತ ಶಿಶು ದೇಹ ಪತ್ತೆ; ಮಹಿಳೆ ಬಂಧನ

Published

on

ಸುದ್ದಿದಿನ ಡೆಸ್ಕ್
ಏರ್ ಏಷಿಯಾ ವಿಮಾನದ ಲ್ಯಾವಟರಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆಯಾದ ಘಟನೆ ದೆಹಲಿಯಲ್ಲಿ ನಡೆದಿದ್ದು, ಶಿಶುವಿಗೆ ಜನ್ಮನೀಡಿ ವ್ಯಾವಟರಿಯಲ್ಲಿ ಮೃತದೇಹ ಬಿಟ್ಟು ಹೋಗಿದ್ದ ಮಹಿಳೆಯೊಬ್ಬರನ್ನು ಬಂಧಿಸಲಾಯಿತು.

ಇಂಫಾಲದಿಂದ ಗುವಾಹಟಿ ಮಾರ್ಗವಾಗಿ ದೆಹಲಿಗೆ ಹೋಗುತ್ತಿದ್ದ ವಿಮಾನದ ಲ್ಯಾವಟರಿಯಲ್ಲಿ ಮೃತದೇಹ ಬಿಟ್ಟು ಹೋಗಿದ್ದನ್ನು ವಿಮಾನದ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರನ್ನು ವಿಚಾರಿಸಲಾಗಿದೆ. ಈ ವೇಳೆಯೊಬ್ಬಳು ಸತ್ಯ ಹೊರಬಂದಿದೆ ಎಂದು ಪಿಟಿಐ ವರದಿ ಮಾಡಿದೆ.

ವಿಮಾನದ ಸಿಬ್ಬಂದಿಗೆ ಲ್ಯಾವಟರಿಯಲ್ಲಿ ನವಜಾತ ಶಿಶು ಮೃತಸ್ಥಿತಿಯಲ್ಲಿ ಸಿಕ್ಕಿದೆ. ಈ ವಿಷಯವನ್ನು ದೆಹಲಿ ಪೊಲೀಸರಿಗೆ ತಲುಪಿಸಲಾಗಿದೆ. ಪೊಲೀಸರು ಡಾಕ್ಟರೊಂದಿಗೆ ಆಗಮಿಸಿ ವಿಮಾನದಲ್ಲಿ ಪರಿಶೀಲನೆ ನಡೆಸಿದ್ದಾರೆ. ವಿಮಾನದಲ್ಲಿ ಗುವಾಹಟಿ ಮಹಿಳೆಯೊಬ್ಬಳು ಅವಧಿ ಮೊದಲೇ ಮಗುವಿಗೆ ಜನ್ಮನೀಡಿದ್ದಾಳೆ ಎಂದು ಏರ್ ಏಷಿಯಾ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version