ಲೈಫ್ ಸ್ಟೈಲ್

ಸನ್ನಿ ಲಿಯೋನ್ ಆಹಾರದ ಗುಟ್ಟು, ನಿಮಗೆಷ್ಟು ಗೊತ್ತು !

Published

on

ಬಾಲಿವುಡ್ ಜನಪ್ರಿಯ ನಟಿ ಸನ್ನಿ ಲಿಯೋನ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಪಡ್ಡೆ ಹುಡುಗರಿಗಂತೂ ಅಚ್ಚುಮೆಚ್ಚು. ಅವರ ಬರುತ್ತಾರೆಂದರೆ ಜನಸಂದಣಿಯ ಸೇರುತ್ತದೆ. ಈಚೆಗೆ ಬೆಂಗಳೂರಿಗೆ ಬಂದಾಗ ಅಲ್ಲಿ ಅಭಿಮಾನಿಗಳ ದಂಡೇ ಸೇರಿತ್ತು.  ಅವರ ಸೌಂದರ್ಯಕ್ಕೆ‌ ಅವರು ಕಾಯ್ದು ಕೊಂಡಿರುವ ಆರೋಗ್ಯ ಮಂತ್ರವೇ ಕಾರಣ. ಸನ್ನಿ ಲಿಯೋನ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಕೆಲ ನಿಯಮಗಳನ್ನು ನಿಮಿತವಾಗಿ ಪಾಲಿಸುತ್ತಿದ್ದಾರೆ. ಸನ್ನಿ ಲಿಯೋನ್

ನೀಲಿಚಿತ್ರ ತಾರೆ ಎಂಬ ಕಾರಣಕ್ಕೆ ಹಲವರು ಅಪಹಾಸ್ಯ ಮಾಡಬಹುದು. ಆದರೆ ಸನ್ನಿ ತಮ್ಮ ಬದುಕಿನಲ್ಲಿ ರೂಢಿಸಿಕೊಂಡ ಕೆಲ ಆದರ್ಶಗಳು ಇತರರಿಗೆ ಮಾದರಿ ಅಂದರೆ ತಪ್ಪಾಗಲಾರದು.

ಸನ್ನಿ ಲಿಯೋನ್ ಡಯೆಟ್ ಸಿಕ್ರೇಟ್ಸ್

2011ರಲ್ಲಿ ರಿಯಾಲಿಟಿ ಶೋ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್‌ಗೆ ಭಾರತವಲ್ಲದೇ ಪ್ರಪಂಚದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವಿದೆ. ಅವರಿಗೆ ಆತ್ಮವಿಶ್ವಾಸದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ.

ಜಿಮ್ಮಿಂಗ್

ಸನ್ನಿ ಲಿಯೋನ್ ಸುಂದರ ಹೊಂದಿರಲು ಮುಖ್ಯ ಕಾರಣ ಜಿಮ್ ಮಾಡುತ್ತಿರುವುದು. ವಾರದಲ್ಲಿ ಕನಿಷ್ಠ ಎರಡ್ಮೂರು ಬಾರಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ಸದೃಢ ಕಾಯ ಹೊಂದಲು ಇದು ಮುಖ್ಯ ಮಾರ್ಗವಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡರೆ ಸುಂದರ ದೇಹ ಹೊಂದಬಹುದು ಎಂಬುದಕ್ಕೆ ಸನ್ನಿಯೇ ಸರಿಯಾದ ಉದಾಹರಣೆ.

ಯೋಗ

ಯೋಗವು ಶಕ್ತಿಯುತ ಮತ್ತು ಸಮಯೋಚಿತ ವ್ಯಾಯಾಮವಾಗಿದ್ದು, ಅದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುವ ಮಾರ್ಗವಾಗಿದೆ ಎಂಬುದು ಸನ್ನಿ ಲಿಯೋನ್ ಮಂತ್ರ.

ಯೋಗವನ್ನು ಜೀವನದಲ್ಲಿ ರೂಢಿಸಿಕೊಂಡರೆ ನಮ್ಮ ದೇಹ, ಮನಸ್ಸಿನ ಮೇಲೆ ಅದ್ಭುತವಾದ ಫಲಿತಾಂಶಗಳನ್ನು ಪಡೆಯಬಹುದು. ಇದನ್ನು ಕಲಿಯಲು ಆಸಕ್ತಿ ಇದ್ದರೆ ಸಾಕು. ನಿಮ್ಮ ಮನೆಯ ಹತ್ತಿರದಲ್ಲೇ ತರಬೇತಿ ಕೇಂದ್ರ ಹೋಗಬಹುದು. ನೀವು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಯುಟ್ಯೂಬ್‌ನಲ್ಲಿ ವಿಡಿಯೋ ನೋಡಿ ಯೋಗ ಮಾಡಬಹುದು. ನೀವು ಪ್ರತಿದಿನವೂ 20ನಿಮಿಷ ಮಿಸಲಿಟ್ಟು ಇದರ ಫಲಿತಾಂಶ ಪಡೆಯಬಹುದು.

ಪಿಲೇಟ್ಸ್ ವ್ಯಾಯಾಮಗಳು

ಪಿಲೇಟ್ಸ್ಗಳು ಸೌಂದರ್ಯ ವರ್ಧಕ, ಉತ್ತಮ ದೇಹಾಕಾರ ಹೊಂದಲು ಅನುಕೂಲಕರವಾದ ಸಾಧನಾ ಸಲಕರಣೆ. ಇದು ನಿಮ್ಮ ದೇಹದ ಸಾಮರ್ಥ್ಯ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ನಮ್ಮ ದೇಹದಲ್ಲಿ ಇರುವ ಬೇಡವಾದ ಕ್ಯಾಲೋರಿಗಳನ್ನು ಕರಗಿಸುತ್ತದೆ. ಸೂಕ್ತ ವಿಡಿಯೋಗಳನ್ನು ನೋಡಿ ಈ ವ್ಯಾಯಾಮವನ್ನು ಮಾಡಬಹುದಾಗಿದೆ.

ಸ್ಕ್ವಾಟ್ ಆಸನ ವಿಧಾನ:

ನಾವು ಕುಳಿತುಕೊಳ್ಳುವ ವಿಧಾನದಿಂದ ನಮ್ಮ ದೇಹದಾಕಾರ ಪಡೆದುಕೊಳ್ಳುತ್ತದೆ. ಸನ್ನಿ ಲಿಯೋನ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರು ಯಾವಾಗಲೂ ಮಂಡಿಯೂರಿ ಕುಳಿತುಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಇದು ದೇಹವನ್ನು ಉತ್ತಮ ಆಕಾರದಲ್ಲಿಡಲು ಸಹಕಾರಿಯಾಗುತ್ತದೆ.

Read also: [ ಬೇವಿನ ಉಪಯೋಗ] ಕಹಿ ಬೇವು ಗುಣದಲ್ಲಿ ಅಮೃತ !

ನಡಿಗೆ

ಸನ್ನಿ ಲಿಯೋನ್ ಪ್ರಕಾರ ನಡಿಗೆ ನಮ್ಮ ಆರೋಗ್ಯ ಮತ್ತು ಉತ್ತಮ ದೇಹ ಹೊಂದಲು ಪರಿಣಾಮಕಾರಿಯಾದ ಸಾಧನ. ಅವರು ಪ್ರತಿದಿನವೂ ಬೆಳಗ್ಗೆ 20ನಿಮಿಷಗಳ ಕಾಲ ವಾಕ್ ಮಾಡುತ್ತಾರೆ. ಇದು ದೈನಂದಿನ ಚಟುವಟಿಕೆಗಳನ್ನು ಕ್ರಿಯಾಶೀಲತೆಯಿಂದ ಮಾಡಲು ಅನುಕೂಲವಾಗುತ್ತದೆ. ದಿನವಿಡೀ ತಾಜಾತನದಿಂದ ಇರಬಹುದು ಎಂಬುದು ಅವರ ನಂಬಿಕೆ.

ಆಹಾರ ಸೇವನೆ ಕುರಿತು ಸನ್ನಿ ಲಿಯೋನ್ ಸಲಹೆಗಳು

ಸನ್ನಿ ಲಿಯೋನ್ ತಾವೂ ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆಹಾರ ದೇಹಾರೋಗ್ಯ ಕಾಪಾಡಲು ಹೆಚ್ಚು ಪರಿಣಾಮಕಾರಿಯಾದ ವಿಧಾನವಾಗಿದೆ. ಆಹಾರವನ್ನು ಸಮತೋಲನವಾಗಿ ತೆಗೆದುಕೊಳ್ಳುತ್ತಾರೆ. ಸನ್ನಿ ಕೆಲವು ಸರಳ ತತ್ವಗಳನ್ನು ಅನುಸರಿಸುತ್ತಾರೆ. ಇವುಗಳನ್ನು ನೀವು ಪಾಲಿಸಿದರೆ ಉತ್ತಮ ದೇಹ ಹೊಂದಬಹುದು.

ಪ್ರತಿದಿನವೂ ತಪ್ಪದೇ ಎಳೆ ನೀರು ಕುಡಿಯುತ್ತಾರೆ. ಇದು ನಿಮ್ಮನ್ನು ದಿನವಿಡೀ ಉಲ್ಲಾಸದಿಂದ ಇರಲು ಅನುಕೂಲವಾಗಿದೆ. ನಿಮ್ಮ ಮುಖದ ಕಾಂತಿ ಹೆಚ್ಚಿಸುತ್ತದೆ.

ನೀವು ಸೇವಿಸುವ ಊಟದ ವೇಳೆ ಹಾಲು ತೆಗೆದುಕೊಳ್ಳಬೇಕು. ಇದು ನಿಮ್ಮ ದೇಹಕ್ಕೆ ಬೇಕಾದ ಶಕ್ತಿ ಒದಗಿಸುತ್ತದೆ. ನಿಮ್ಮನ್ನು ಡಿಹೈಡ್ರೀಕರಣ (ನಿರ್ಜಲಿಕರಣ) ದಿಂದ ದೂರವಿಡುತ್ತದೆ. ಯಾವಾಗಲೂ ತಾಜಾ ತರಕಾರಿಗಳನ್ನು ಸೇವಿಸಿ. ಸಾಧ್ಯವಾದಷ್ಟು ಪ್ಯಾಕ್ ಮಾಡಿದ ಆಹಾರಗಳಿಂದ ದೂರವಿರಿ. ಇದು ನಿಮಗೆ ಅಲ್ಪಾವಧಿಯಲ್ಲಿ ರುಚಿ ನೀಡಿದರೂ ದೀರ್ಘಾವಧಿಯಲ್ಲಿ ಆರೋಗ್ಯ ಹಾನಿಕಾರಕ ಎಂಬುದು ಸನ್ನಿ ಲಿಯೋನ್ ಅಭಿಪ್ರಾಯ.

ಆರೋಗ್ಯ, ಆಹಾರ, ಜೀವನಶೈಲಿ ಕುರಿತು suddidina.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ suddidinna@gmail.com  ಗೆ ಸಂಪರ್ಕಿಸಿ.

#ಆರೋಗ್ಯ #ಆಹಾರ #ಜೀವನಶೈಲಿ   #kannadatips #kannadahealthtips #healthtips

Trending

Exit mobile version