ದಿನದ ಸುದ್ದಿ

ಬಾಂಬ್ ಸೈಕ್ಲೋನ್

Published

on

ಭಾರತದಲ್ಲಿ ಮಾನ್ಸೂನ್ ಪ್ರವೇಶ ಹಾಗೂ ಹಿಂದಿರುಗುವಿಕೆ ನಡುವಿನ ಅವಧಿಯಲ್ಲಷ್ಟೇ ಚಂಡಮಾರುತ (ಸೈಕ್ಲೋನ್) ಉಂಟಾಗುತ್ತವೆ. ಇಲ್ಲಿ ಸೈಕ್ಲೋನ್ ಎಂದರೆ ವೇಗದ ಗಾಳಿ, ಬಿಡದೆ ಸುರಿಯುವ ಮಳೆಯಷ್ಟೇ ಇರುತ್ತದೆ. ಆದರೆ, ವಿಶ್ವದ ವಿವಿಧ ಪ್ರದೇಶಗಳಲ್ಲಿ ಉಂಟಾಗುವ ಚಂಡಮಾರುತಗಳು ರೌದ್ರವಾಗಿರುತ್ತದೆ.

ಕೆಲ ಪ್ರದೇಶಗಳಲ್ಲಿ ಮಳೆಗಾಲದಲ್ಲಷ್ಟೇ ಅಲ್ಲದೆ ಚಳಿಗಾಲದಲ್ಲೂ ಸೈಕ್ಲೋನ್ ಉಂಟಾಗುತ್ತದೆ.ಹೀಗೆ ಚಳಿಗಾಲದಲ್ಲಿ ಉಂಟಾಗುವ ಬಿರುಗಾಳಿಗೆ ‘ಬಾಂಬ್ ಸೈಕ್ಲೋನ್’ ಎನ್ನುತ್ತಾರೆ. ಮುಖ್ಯವಾಗಿ ಉತ್ತರ ಅಮೆರಿಕ ಪ್ರದೇಶದಲ್ಲಿ ಬಾಂಬ್ ಸೈಕ್ಲೋನ್ ಉಂಟಾಗುತ್ತದೆ. ಈ ಭಾಗದಲ್ಲಿ 8 ಕೋಟಿಗೂ ಹೆಚ್ಚು ಜನ ನೆಲೆಸಿದ್ದು, ಸುಮಾರು 2.2 ಕೋಟಿ ಜನ ಕರಾವಳಿ ಪ್ರವಾಹದ ಅಪಾಯಕ್ಕೆ ಸಿಲುಕುತ್ತಾರೆ.

ಏನಿದು ಬಾಂಬ್ ಸೈಕ್ಲೋನ್?: ಚಳಿಗಾಲದ ಬಿರುಗಾಳಿ ಕ್ಷಿಪ್ರವಾಗಿ ರೂಪುಗೊಂಡು, ಹೆಚ್ಚು ವೇಗವಾಗಿ ಬೀಸುವುದರಿಂದ ಹವಾಮಾನ ಶಾಸ್ತ್ರಜ್ಞರು ಇದಕ್ಕೆ ‘ಬಾಂಬ್ ಸೈಕ್ಲೋನ್’ ಎಂದು ಹೆಸರಿಟ್ಟಿದ್ದಾರೆ. ಸುಮಾರು 24 ಗಂಟೆಗಳ ಕಾಲ ವಾತಾವರಣದ ಒತ್ತಡ 24 ಮಿಲಿಬಾರ್‌ನಷ್ಟು ಕನಿಷ್ಠ ಮಟ್ಟದಲ್ಲಿದ್ದಾಗ ಈ ಬಾಂಬ್ ಸೈಕ್ಲೋನ್‌ಗಳು ರೂಪುಗೊಳ್ಳುತ್ತವೆ. ಕೆಲವೇ ನಿಮಿಷಗಳಲ್ಲಿ ರೂಪುಗೊಂಡು ಪ್ರಚಂಡ ವೇಗದಲ್ಲಿ ಬೀಸಲಾರಂಭಿಸುತ್ತವೆ.ವಾತಾವರಣದ ಒತ್ತಡ ಕಡಿಮೆಯಾದಷ್ಟೂ, ಬಿರುಗಾಳಿಯ ತೀವ್ರತೆ ಹೆಚ್ಚಿರುತ್ತದೆ.

ಕಾರ್ಯಚಟುವಟಿಕೆ ಹೇಗೆ?: ವಾತಾವರಣದಲ್ಲಿ ಉಷ್ಣಗಾಳಿ ಮತ್ತು ಶೀತಗಾಳಿಗಳೆರಡೂ ಸಂಧಿಸಿದಾಗ ವಾತಾವರಣದಲ್ಲಿ ಭಾರಿ ವಾಯುಭಾರ ಕುಸಿತವಾಗುತ್ತದೆ. ಭೂಮಿ ಚಲನೆಯ ಪರಿಣಾಮ ಗಾಳಿಯೂ ಚಲಿಸಲಾರಂಭಿಸುತ್ತದೆ. ಇದರಿಂದ ಚಂಡಮಾರುತ ಉಂಟಾಗುತ್ತದೆ. ಈ ರೀತಿ ಉಂಟಾಗುವ ಚಂಡಮಾರುತಗಳು ಉತ್ತರಗೋಳಾರ್ಧದಲ್ಲಿ ಅಪ್ರದಕ್ಷಿಣವಾಗಿ (Counterclockwise) ಸುತ್ತುತ್ತವೆ.

ಹರಿಕೇನ್, ಸೈಕ್ಲೋನ್, ಟೈಫೋನ್‌ಗಳ ವ್ಯತ್ಯಾಸ:

ಹರಿಕೇನ್, ಸೈಕ್ಲೋನ್ ಹಾಗೂ ಟೈಫೋನ್‌ಗಳೆಲ್ಲವೂ ಉಷ್ಣವಲಯದ ಬಿರುಗಾಳಿಗಳಾಗಿವೆ. ಇವೆಲ್ಲವುಗಳ ಗುಣಗಳು ಒಂದೇ ಆಗಿದ್ದು, ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗಿದೆ.

ಈ ಚಂಡಮಾರುತಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸಿದವೆಂದರೆ ಆಸ್ತಿ ಹಾಗೂ ಜೀವ ಹಾನಿ ಉಂಟುಮಾಡುತ್ತವೆ. ಉತ್ತರ ಅಟ್ಲಾಂಟಿಕ್ ಹಾಗೂ ಈಶಾನ್ಯ ಪೆಸಿಫಿಕ್ ಸಾಗರಗಳಲ್ಲಿ ಉಂಟಾಗುವ ಚಂಡಮಾರುತಗಳಿಗೆ ಹರಿಕೇನ್ ಎನ್ನುತ್ತಾರೆ.

ದಕ್ಷಿಣ ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಚಂಡಮಾರುತಗಳಿಗೆ ಸೈಕ್ಲೋನ್ ಎಂದೂ, ವಾಯವ್ಯ ಪೆಸಿಫಿಕ್ ಭಾಗದಲ್ಲಿ ಉಂಟಾಗುವ ಚಂಡಮಾರುತಗಳಿಗೆ ಟೈಪೋನ್‌ಗಳೆಂದು ಕರೆಯುತ್ತಾರೆ. ಇದಲ್ಲದೆ ಸ್ಥಳೀಯವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಪ್ರಪಂಚದ ಮುಖ್ಯ ಸ್ಥಳೀಯ ಮಾರುತಗಳು:

* ಪೋಹನ್ – ಮಧ್ಯ ಯೂರೋಪ್

* ಚಿನೂಕ್ – ರಾಕಿ ಪರ್ವತ

* ಸಾಂತಾ ಆನಾ – ಕ್ಯಾಲಿಫೋರ್ನಿಯಾ

* ಯಾಮೋ- ಜಪಾನ್

* ಜೋಂಡಾ – ಅರ್ಜೆಂಟೈನಾದ ಆ್ಯಂಡೀಸ್’

* ಪರ್ವತ

* ಬ್ರಿಕ್ ಫೀಲ್ಡರ್ – ಆಸ್ಟ್ರೇಲಿಯಾ

* ಖಾಮ್‌ಸಿನ್ – ಈಜಿಪ್

* ಸಿಮೂನ್ – ಸಹರಾ ಮರುಭೂಮಿ

* ಬ್ಯಾಕ್ ರೋಲರ್ – ಯುಎಸ್‌ಎ

* ನಾರ್ವೆಸ್ಟರ್- ಆಸ್ಟ್ರೇಲಿಯಾ ಹಾಗೂ ಪಶ್ಚಿಮ ಭಾರತ

(ಸಂಗ್ರಹ)

ವಿಡಿಯೋ ಸುದ್ದಿ ನೋಡಲು ಸುದ್ದಿದಿನ Youtube channel ಗೆ subscribe ಆಗಿ:

Leave a Reply

Your email address will not be published. Required fields are marked *

Trending

Exit mobile version