ದಿನದ ಸುದ್ದಿ
ವೆಬಿನಾರ್ ಮೂಲಕ ಇಂದು ಡಾ. ಎನ್.ಕೆ ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ : ಲಿಂಕ್ ಬಳಸಿ ನೀವೂ ಭಾಗವಹಿಸಿ
ಸುದ್ದಿದಿನ ಡೆಸ್ಕ್ : ಉಜಿರೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ. ಪದ್ಮನಾಭ ಅವರ ನೂತನ ಕೃತಿ ‘ಸುದ್ದಿ ಸಂವಿಧಾನ’ ವೆಬಿನಾರ್ ಮೂಲಕ ಜುಲೈ 13 ಇಂದು (ಸೋಮವಾರ) ಬೆಳಿಗ್ಗೆ 11ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಕೃತಿಯನ್ನು ಎಸ್ ಡಿ ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಬಿಡುಗಡೆಗೊಳಿಸಲಿದ್ದಾರೆ. ‘ದಿ ಹಿಂದೂ’ ಪತ್ರಿಕೆಯ ನಿಕಟಪೂರ್ವ ಪ್ರಧಾನ ವರದಿಗಾರ, ‘ತುಂಗಭದ್ರಾ’ ಇಂಗ್ಲಿಷ್ ನ್ಯೂಸ್ ಪೋರ್ಟಲ್ ಸಂಪಾದಕ ವೀರೇಂದ್ರ ಪಿ.ಎಂ ಕೃತಿಯ ಬಗ್ಗೆ ಮಾತನಾಡಲಿದ್ದಾರೆ.
ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
Dial-in: (US) +1 219-401-0040 PIN: 227 877 321#
ಸುದ್ದಿದಿನ.ಕಾಂ|ವಾಟ್ಸಾಪ್|9980346243