ದಿನದ ಸುದ್ದಿ

‘ಕನ್ನಡ ಸಾಂಸ್ಕೃತಿಕ ಗತವೈಭವ’ದಿಂದ ವಾರ್ಷಿಕ ಸಾಧಕ ಪ್ರಶಸ್ತಿಗೆ ಕೃತಿಗಳ ಅಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕನ್ನಡ ಸಾಂಸ್ಕೃತಿಕ ಗತವೈಭವ ಹಾಗೂ ವಿವಿಧೋದ್ದೇಶ ಸಂಸ್ಥೆ (ರಿ) ರಾಜ್ಯ ಘಟಕ-ದಾವಣಗೆರೆ ವತಿಯಿಂದ ರಾಜ್ಯದ ವಿವಿಧ ಲೇಖಕರಿಂದ ಕಥಾಸಂಕಲನ ಮತ್ತು ಕಾದಂಬರಿ ಸಾಹಿತ್ಯ ಕೃತಿಗಳಿಗೆ ಪ್ರತಿಷ್ಠಿತ ವಾರ್ಷಿಕ ಸಾಧಕ ಪ್ರಶಸ್ತಿಗೆ ಅರ್ಜಿ ಅಹ್ವಾನ ಮಾಡಲಾಗಿದ್ದು ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡಿದ ಒಂದೊಂದು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಆಸಕ್ತರು2020-21ನೆಯ ಸಾಲಿನಲ್ಲಿ ಪ್ರಕಟವಾಗಿರುವ ಕಥಾಸಂಕಲನ & ಕಾದಂಬರಿಯ ಎರಡು ಪ್ರತಿಗಳ ಜೊತೆ ತಮ್ಮ ಪರಿಚಯ ಪತ್ರದೊಂದಿಗೆ ಆಗಸ್ಟ್ 20ರೊಳಗೆ ಅಧ್ಯಕ್ಷರು ಕನ್ನಡ ಸಾಂಸ್ಕೃತಿಕ ಗತವೈಭವ ಹಾಗೂ ವಿವಿಧೋದ್ದೇಶ ಸಂಸ್ಥೆ (ರಿ) ನವಿಲೇಹಾಳ್, ಚನ್ನಗಿರಿ ತಾಲ್ಲೂಕ್, ದಾವಣಗೆರೆ ಜಿಲ್ಲೆ – 577544.

ಇದನ್ನೂ ಓದಿ | ಎತ್ತಿನ ಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿ ; ಡಾ. ಕೆ. ಸುಧಾಕರ್

ಸಂಚಾರಿ :9743930178 ಈ ವಿಳಾಸಕ್ಕೆ ಕಳುಹಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದು. 97439 30178, 9535104785, 9164827122, 9741270125.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version