ದಿನದ ಸುದ್ದಿ
ಶಿವಮೊಗ್ಗ : ಜೂನ್ 22 ರಂದು ಡಾ.ಸಾಸ್ವೆಹಳ್ಳಿ ಸತೀಶ್ ಅವರ ನಾಟಕ ಕೃತಿಗಳ ಲೋಕಾರ್ಪಣೆ
ಸುದ್ದಿದಿನ,ಶಿವಮೊಗ್ಗ : ರಂಗಕರ್ಮಿ ಡಾ. ಸಾಸ್ವೆಹಳ್ಳಿ ಸತೀಶ್ ಅವರ ‘ಕಿತ್ತೂರ ನಿರಂಜನಿ’, ವೀರ ಉತ್ತರಕುಮಾರ ಎರಡು ನಾಟಕ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಜೂನ್ 22 (ಶನಿವಾರ) ನಗರದ ಸರ್ಕಾರಿ ನೌಕರರ ಭವನದಲ್ಲಿ ಸಂಜೆ 6ಗಂಟೆಗೆ ನಡೆಯಲಿದೆ.
ಅಂದು ನಾಟಕ ಕೃತಿಗಳ ಲೋಕಾರ್ಪಣೆಯನ್ನು ಡಾ.ರಾಜೇಂದ್ರ ಚೆನ್ನಿ ಮಾಡಲಿದ್ದು, ‘ಕಿತ್ತೂರ ನಿರಂಜನಿ’ ನಾಟಕ ಕುರಿತು ಉಪನ್ಯಾಸಕ ಶಿವಕುಮಾರ್ ಮಾವಲಿ ಹಾಗೂ ‘ವೀರ ಉತ್ತರಕುಮಾರ’ ನಾಟಕ ಕುರಿತು ಉಪನ್ಯಾಸಕ ಸುರೇಶ್ ಶಿಕಾರಿಪುರ ಅವರು ಮಾತನಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ, ಅಂಕಣಕಾರ ಬಿ.ಚಂದ್ರೇಗೌಡ ಅವರುವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಸಚಿನ್ ಕುಡತೂರಕರ್, ಅರವಿಂದ್ ಇಂಡಿಯಾ ಬೆಂಗಳೂರು ಇವರು ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243