ದಿನದ ಸುದ್ದಿ
ಜೂನ್ 2 ರಂದು ‘ಪ್ರೇಮಾನುರಾಗ’ ಪುಸ್ತಕ ಲೋಕಾರ್ಪಣೆ ಮತ್ತು ಕವಿ ಕಾವ್ಯ ಸಮ್ಮಿಲನ
ಸುದ್ದಿದಿನ,ರಾಣೆಬೆನ್ನೂರು : ಪ್ರೇಮಗಂಗ ಹೆಲ್ಪ್ ಕೇರ್ ಮತ್ತು ಕಾವ್ಯ ಮಿತ್ರ ಪ್ರಕಾಶನದ ಸಹಯೋಗದಲ್ಲಿ ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದಲ್ಲಿ ಜೂನ್ 2 ರ ಭಾನುವಾರ ಬೆಳಗ್ಗೆ 9:30 ಕ್ಕೆ ಕವಿ ಪ್ರೇಮಾರ್ಜುನ ಐರಣಿಯವರ ಪ್ರೇಮಾನುರಾಗ ಪುಸ್ತಕ ಲೋಕಾರ್ಪಣೆ ಹಾಗೂ ಕವಿ ಕಾವ್ಯ ಸಮ್ಮಿಲನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9:30 ಕ್ಕೆ ಚಿಂಚಲಿ ಮಾಯಮ್ಮ ವೇದಿಕೆಯಲ್ಲಿ ಐರಣಿ ಗ್ರಾಪಂ ಅಧ್ಯಕ್ಷ ಬಿ.ಬಿ ಬಣಕಾರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕವಯಿತ್ರಿ ತುಮಕೂರಿನ ರತ್ನ ಬಡವನಹಳ್ಳಿ ಉದ್ಘಾಟಿಸುವರು. ರಾಣೆಬೆನ್ನೂರು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಭಾರತಿ ಜಂಬಗಿ ಪುಸ್ತಕ ಅನಾವರಣ ಮಾಡುವರು. ಸಾಹಿತಿ ಮೈಸೂರಿನ ದೊರೆಸ್ವಾಮಿ ಸಿದ್ದೇಗೌಡ್ರು ಪುಸ್ತಕ ಪರಿಚಯ ಮಾಡುವರು.
ಮುಖ್ಯ ಅತಿಥಿಗಳಾಗಿ ಅಲ್ಲಾಗಿರಿ ರಾಜ್ ಕನಕಗಿರಿ, ಕಸ್ತೂರಮ್ಮ, ಪ್ರಕಾಶ್ ಬುರಡಿಕಟ್ಟಿ, ರಾಘವೇಂದ್ರ ಓಲೇಕಾರ್, ಶಶಿಕಾಂತ್ ರಾವ್, ಸುರೇಶ್ ಕೊರಕೊಪ್ಪ, ರೇಖಾ ಕೊಟ್ಟೂರು ಭಾಗವಹಿಸುವರು. ಲೇಖಕ ಪ್ರೇಮಾರ್ಜುನ ಐರಣಿ ಉಪಸ್ಥಿತರಿರುವರು.
ಮಧ್ಯಾಹ್ನ 12:30ಕ್ಕೆ ಸಾಹಿತಿ ಹಾವೇರಿಯ ಪೀರ್‌ಸಾಬ್ ನದಾಫ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯ ಮುಖ್ಯ ಅತಿಥಿಗಳಾಗಿ ಸಾಹಿತ್ಯ ವಲಯದ ಶಂಕರ್ ದೊಡ್ಡಮನಿ, ಪ್ರಕಾಶ್ ಎನ್ ಜಿಂಗಾಡೆ, ಚಂದ್ರಶೇಖರ ಮಾಡಲಗೇರಿ, ಲಿಂಗಯ್ಯ ಹಿರೇಮಠ, ಅಣ್ಣಪ್ಪ ಮೇಟಿಗೌಡ, ಕನಕ ಪ್ರೀತೀಶ್, ಪಾಪುಗುರು ದಾವಣಗೆರೆ, ಸಂತೋಷ್ ಬಿದರಗಡ್ಡೆ, ವೀರೇಶ್ ಹಿತ್ತಲಮನಿ ಹಾಗೂ ಪ್ರಸಾದ್ ಕುಲಕರ್ಣಿ, ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಗಂಗಪ್ಪ ಕೊಟ್ರಪ್ಪ ಚಳಗೇರಿ ಹಾಗೂ ಪ್ರೇಮ ಗಂಗಪ್ಪ ಅವರಿಗೆ ವಿಶೇಷ ಗೌರವಾರ್ಪಣೆ, ಕವಿಗಳಾದ ದಾವಣಗೆರೆಯ ಡಾ.ಆನಂದ್ ಋಗ್ವೇದಿ, ಫೈಜ್ ನಟ್ರಾಜ್, ರೇಣುಕಾ ರಮಾನಂದ್ ಹಾಗೂ ಮುದಲ್ ವಿಜಯ್, ಉದಯೋನ್ಮುಖ ಕವಿ ವೈ.ಜೆ ಮೆಹಬೂಬ್ ಅವರಿಗೆ ಸನ್ಮಾನ ಹಾಗೂ ಎಸ್ಸೆಸ್ಸಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸುವ ಕವಿಗಳು ಕವನ ವಾಚಿಸುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243