ದಿನದ ಸುದ್ದಿ
ದಾವಣಗೆರೆ | ನಾಳೆ ‘ಭಾರತ ಒಂದು ಮರುಶೋಧನೆ’ ಪುಸ್ತಕ ಸಂವಾದ
ಸುದ್ದಿದಿನ,ದಾವಣಗೆರೆ : ಪ್ರಸ್ತುತ ಅಮೇರಿಕಾದ ಶಿಕಾಗೋದಲ್ಲಿರುವ ದಾವಣಗೆರೆ ಮೂಲದ ಲೇಖಕ ರವಿ ಹಂಜ್ ರವರ ” ಭಾರತ ಒಂದು ಮರು ಶೋಧನೆ ” ಪುಸ್ತಕ ಕುರಿತು ದಿನಾಂಕ : 05/09/2019 ರ ಸಂಜೆ 5.30 ಕ್ಕೆ ದಾವಣಗೆರೆ ರೋಟರಿ ಬಾಲ ಭವನದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ನಾಗಭೂಷಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಆನಂದ್ ಋಗ್ವೇದಿ ಪುಸ್ತಕ ಪರಿಚಯ ಹಾಗೂ ಪ್ರೊ. ಗಣೇಶ್ ಅವರು ಸಂವಾದ ನಿರ್ವಹಣೆ ಮಾಡುವರು.
ನಗರದ ಸಾಹಿತಿಗಳು, ಪುಸ್ತಕ ಪ್ರೇಮಿಗಳು, ಚಿಂತಕರು, ವಿಚಾರವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪ್ರೊ. ಗಣೇಶ್ ಕೋರಿದ್ದಾರೆ.
ಸುದ್ದಿದಿನ|ವಾಟ್ಸಾಪ್|9980346243