ದಿನದ ಸುದ್ದಿ
ಗಡಿ ಬಿಕ್ಕಟ್ಟು : ಭಾರತ-ಚೀನಾ ಮಹತ್ವದ ಮಾತುಕತೆ
ಸುದ್ದಿದಿನ ಡೆಸ್ಕ್ : ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇಂದು ನವದೆಹಲಿಯಲ್ಲಿ ಭಾರತ ಮತ್ತು ಚೀನಾದ ರಕ್ಷಣಾ ಸಚಿವರುಗಳ ಮಧ್ಯೆ ಮಹತ್ವದ ಮಾತುಕತೆ ನಡೆಯಲಿದೆ.
ಭಾರತ ಮತ್ತು ಶಾಂಘೈ ಸಹಕಾರ ಸಂಸ್ಥೆ ಏರ್ಪಡಿಸಿರುವ ಈ ಮಹತ್ವದ ಸಭೆಯಲ್ಲಿ ಭಾರತದ ಪರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವ ವಹಿಸಲಿದ್ದು, ನೆರೆಯ ರಾಷ್ಟ್ರಗಳಾದ ಚೀನಾ, ಕಜಿಕಿಸ್ಥಾನ್, ಕಿರಿಗಿಸ್ಥಾನ್, ರಷ್ಯಾ, ತಜಿಕಿಸ್ಥಾನ್ ಮತ್ತು ಉಜ್ಬೇಕಿಸ್ಥಾನ್ ರಕ್ಷಣಾ ಸಚಿವರುಗಳು ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದು, ಬೆಲರಾಸ್ ಮತ್ತು ಇರಾನ್ ರಾಷ್ಟ್ರಗಳ ಸಚಿವರುಗಳನ್ನು ಭಾರತ ವೀಕ್ಷಕರನ್ನಾಗಿ ಆಹ್ವಾನಿಸಿದೆ.
ಪ್ರಾದೇಶಿಕ ಶಾಂತಿ ಮತ್ತು ಗಡಿ ಭದ್ರತೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಅನೇಕ ಪರಿಣಾಮಕಾರಿ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲು ಉಭಯ ರಾಷ್ಟ್ರಗಳು ತೀರ್ಮಾನಿಸಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243