ದಿನದ ಸುದ್ದಿ
ವೇದ ಗ್ರಂಥಗಳೇ ಹೇಳುತ್ತಿವೆ ‘ಬ್ರಾಹ್ಮಣರು ಗೋ ಮಾಂಸ’ ತಿನ್ನುತ್ತಿದ್ದರೆಂದು..! : ಓದಿ ಈ ಲೇಖನ
- ವಿ.ಎಸ್. ಬಾಬು
ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರು. ಎಂದು ಅವರು ಬರೆದಿರುವ ವೇದ ಗ್ರಂಥಗಳೇ ಹೇಳುತ್ತಿವೆ ನೋಡಿ…
1 – “ಅಧೋ ಅನ್ನಂ ವಾಯ್ ಗೋವಾ” – “ವಾಸ್ತವವಾಗಿ ಗೋವು ನಮ್ಮ ಆಹಾರವಾಗಿದೆ “. – [ಐತೇರಿಯ ಬ್ರಾಹ್ಮಣ್ಯ: – 111.9.8]
2 – “ಮಾಂಸವಿಲ್ಲದೆ ಮಧುವನನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ “[ಆಶ್ವಲಾಯನ ಗೃಹ್ಯ ಸೂತ್ರ: 1-4]
3 – “ಪಂಡಿತರು, ಪ್ರಸಿದ್ಧರು, ಸಾಮಾಜಿಕರು, ದೇವತೆ, ವೇದಪತಿ, ಕೇಳುಗನನ್ನು ಕೇಳಲು ಬಯಸುವ ತಾಯಿ, ಅಗುನ ಮಗ, ಎಮ್ಮೆ ಅಥವಾ ಎತ್ತು ಮಾಂಸವನ್ನು ತಿನ್ನಬೇಕು.”
[ಬೃಹದಾರಣ್ಯಕಂ]
4 – “ ವಯಸ್ಸಿನಲ್ಲಿದ್ದ ಕರುವನ್ನಾದರೂ, ಅಥವಾ
ಕಡು ವಯಸ್ಸಿನಲ್ಲಿದ್ದ ಎತ್ತನ್ನಾದರೂ ತಿನ್ನಬೇಕು ” [ಶಂಕರಾಚಾರ್ಯರು]
5 – “ ನನ್ನ ಶರೀರದಲ್ಲಿ ಮಾಂಸ ಇರುವ ತನಕ ನಾನು ಎಳೆ ಹಸುವಿನ ಮಾಂಸವನ್ನ ತಿನ್ನುತ್ತೇನೆ “. – [ ಯಜ್ಞವಲ್ಕ – ಶತಪದ ಬ್ರಾಹ್ಮಣ ]
6 – ಭಾರದ್ವಾಜನು ಒಂದು ಕರುವನ್ನು ಕೊಂದು ರಾಮನ ಊಟಕ್ಕೆ ಆಹ್ವಾನಿಸಿದನು
[ ರಾಮಾಯಣ ]
7 – ಯಜ್ಞಗಳು, ಯಾಗಗಳು ಮಾಡಿದ ಮಾಂಸವನ್ನು ತಿನ್ನದಿದ್ದರೆ ಅವನು ಬರುವ ಮುಂದಿನ ಇಪ್ಪತ್ತು ಜನ್ಮಗಳು ಪ್ರಾಣಿಗಳಂತೆ ಹುಟ್ಟುತ್ತಾನೆ. [ ಮನುಧರ್ಮ ಶಾಸ್ತ್ರ – ಸೂಕ್ತ 35 ]
8 – ಮನೆಯಲ್ಲಿ ಎತ್ತು ಮಾಂಸವನ್ನು ತಿನ್ನಬಹುದು, ಹಾಲು ಕೊಡುವ ಹಸುಗಳನ್ನು ಕರುಗಳನ್ನು ಬಲಿ ಕೊಡಬಹುದು ಆದರೆ ಕಟುಕನಿಗೆ ಮಾರಬಾರದು. [ ಕೌಟಿಲ್ಯನ ಅರ್ಥಶಾಸ್ತ್ರ ]
9 – ಉತ್ತರಕ್ರಿಯದಲ್ಲಿ (ದಶದಿನ ಕರ್ಮದಲ್ಲಿ) ಭಾಗವಾಗಿ ಹಸುವನ್ನಾದರೂ, ಎತ್ತನ್ನಾದರೂ ಕೊಂದು ಬ್ರಾಹ್ಮಣರಿಗೆ ಕೊಡುತ್ತಿದ್ದರು. [ ಋಗ್ವೇದ 10, 14-1 ]
10 – ರಂಡಿ ದೇವರ ಊಟ ಅಡುಗೆಮನೆಯಲ್ಲಿ ಎತ್ತನ್ನು ಕೊಂದು ಧಾನ್ಯದ ಜೊತೆಗೆ ಮಾಂಸವನ್ನು ಬಡಿಸುತ್ತಿದ್ದರು. [ ಅಥರ್ವಣ ವೇದ – 11.2, 4]
11 – ಇಂದ್ರನಿಗೆ, ಶಿವನಿಗೆ ಹಸುಗಳನ್ನು ಬಲಿಕೊಡಬೇಕು, ಗರ್ಭಿಣಿ ಸ್ತ್ರೀಯರು ಕೆಂಪು ಎತ್ತಿನ ಮಾಂಸವನ್ನು ತಿಂದರೆ ಶ್ರೇಷ್ಠ ಮಗುವಿಗೆ ಜನ್ಮಕೊಡುತ್ತಾರೆ. [ ಯಾಜ್ಞವಲ್ಕ ಸ್ಮೃತಿ ]
12 – ‘ನಿಮಗೆ ಆಶ್ಚರ್ಯವಾಗಬಹುದು ಪ್ರಾಚೀನ ಹಿಂದೂ ವಿಧಿ ಮತ್ತು ಆಚರಣೆಗಳ ಪ್ರಕಾರ, ದನದ ಮಾಂಸ ತಿನ್ನದಿದ್ದರೆ ಆತ ಒಳ್ಳೆಯ ಹಿಂದೂ ಆಗಲು ಸಾಧ್ಯವಿರಲಿಲ್ಲ’ ಈ ಭಾರತದಲ್ಲೇ ಒಂದು ಕಾಲವಿತ್ತು. ದನವನ್ನು ತಿನ್ನದೇ ಯಾವ ಬ್ರಾಹ್ಮಣನೂ ಬ್ರಾಹ್ಮಣನಾಗಿ ಇರಲು ಸಾಧ್ಯವಿರಲಿಲ್ಲ. ಸನ್ಯಾಸಿಗಳು ಅಥವಾ ರಾಜರು ಅಥವಾ ಯಾರಾದರೂ ಮಹಾಪುರುಷರು ಮನೆಗೆ ಬಂದಾಗ ಅತ್ಯುತ್ತಮವಾದ ಎತ್ತನ್ನು ಕಡಿಯಲಾಗುತ್ತಿತ್ತು ಎಂಬುದನ್ನು ವೇದಗಳಲ್ಲಿ ನೀವು ಓದಬಹುದು’
ಸ್ವಾಮಿ ವಿವೇಕಾನಂದ: [ ಸಮಗ್ರ ಕೃತಿಗಳು ಸಂಪುಟ-3, ಪುಟ-536 ]
ಈಗ ಅವರು ಗೋ ಹತ್ಯೆ ನಿಷೇಧ ಮಾಡಬೇಕೆಂದು ಹೇಳುತ್ತಿದ್ದಾರೆ ಹಾಗದರೆ ಅವರು ಬರೆದಿರುವ ವೇದಗಳನ್ನು ಅವರೆ ಸುಟ್ಟು ಹಾಕಲಿ. ಇಲ್ಲವೆ ಈ ಮಂಡು ವಾದವನ್ನಾದರೂ ಬಿಡಲಿ ಎಂದು ಮನವಿ ಮಾಡುತ್ತೇನೆ ನೀವು ಮಾಡಿಕೊಳ್ಳಿ.
ಎರಡು ದೋಣಿಯಲ್ಲಿ ಕಾಲಿಟ್ಟು ಸಮುದ್ರ ದಾಟಲು ಸಾಧ್ಯವಿಲ್ಲ. ತೀರ್ಮಾನ ಬ್ರಾಹ್ಮಣರಿಗೆ ಬಿಡೋಣ ಧನ್ಯವಾದಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243