ಲೈಫ್ ಸ್ಟೈಲ್
ಚುಮುಚುಮು ಚಳಿಯಲಿ ಬಿಸಿಬಿಸಿ ಬ್ರೆಡ್ ಬೊಂಡಾ ಮಾಡ್ಕೊಳಿ ತಿನ್ಕೊಳಿ
ಚಳಿಗಾಲದಲ್ಲಿ ಕೈ ಕಾಲುಗಳು ಮೈ ಎಲ್ಲಾ ತುಂಬಾ ಒಡೆಯುತ್ತದೆ. ಇದಕ್ಕೆ ಕಾರಣ ನಮ್ಮ ಮೈಯಲ್ಲಿ ಎಣ್ಣೆ ಅಂಶ ಕಡಿಮೆ ಆಗುವುದರಿಂದ. ಆದಷ್ಟು ನಾವು ಈ ಚಳಿಗಾಲದಲ್ಲಿ ಎಣ್ಣೆ ಅಂಶ ಇರುವಂತಹ ತಿನ್ನಿಸುಗಳನ್ನು ತಿನ್ನ ಬೇಕು. ಅದಕ್ಕಾಗಿ ಇಲ್ಲಿದೆ ನೋಡಿ ಒಂದು ರುಚಿಕರವಾದ ಬ್ರೆಡ್ ಬೊಂಡ.
ಬೇಕಾಗುವ ಪದಾರ್ಥಗಳು
- ಬ್ರೆಡ್- 1 ಪೌಂಡ್
- ಕ್ಯಾರೆಟ್- 1
- ಅಚ್ವ ಖಾರದ ಪುಡಿ – ಸ್ವಲ್ಪ
- ಜೀರಿಗೆ ಪುಡಿ – ಸ್ವಲ್ಪ
- ಹಸಿಮೆಣಸಿನಕಾಯಿ – 2
- ಕಡಲೆ ಹಿಟ್ಟು -250 ಗ್ರಾಂ
- ಹಸಿ ಬಟಾಣಿ – ಸ್ವಲ್ಪ
- ಆಲೂಗಡ್ಡೆ -150 ಗ್ರಾಂ
- ಕ್ಯಾಪ್ಸಿಕಂ – 1 ಚಿಕ್ಕದು
- ಧನಿಯಾಪುಡಿ – ಸ್ವಲ್ಪ
- ಈರುಳ್ಳಿ – 3
- ಕೊತ್ತಂಬರಿ ಸೊಪ್ಪು – 1 ಕಂತೆ
- ಅಕ್ಕಿ ಹಿಟ್ಟು – 5೦ ಗ್ರಾಂ
- ಹೂಕೋಸು – ಸ್ವಲ್ಪ
- ಉಪ್ಪು ರುಚಿಗೆ
ಮಾಡುವ ವಿಧಾನ
ಮೊದಲು ಕಡಲೆ ಹಿಟ್ಟನ್ನು ಜರಡಿ ಹಿಡಿದುಕೊಳ್ಳಿ. ಅಕ್ಕಿ ಹಿಟ್ಟನ್ನು ಜರಡಿ ಮಾಡಿಕೊಂಡು ಎರಡು ಹಿಟ್ಟುಗಳನ್ನು ಸೇರಿಸಿ. ಆಲೂಗಡ್ಡೆಗಳನ್ನು ಸಿಪ್ಪೆ ತೆಗೆದು ನುಣ್ಣಗೆ ಬೇಯಿಸಿಕೊಳ್ಳಿ. ಹೀಗೆ ಬೇಯಿಸಿಕೊಂದ ಆಲೂಗಡ್ಡೆಯನ್ನು ನುಣ್ಣಗೆ ಕಿವುಚಿಕೊಳ್ಳಿ. ಹೆಚ್ಚಿಟ್ಟ ಕ್ಯಾರೆಟ್, ಹಸಿ ಬಟಾಣಿ, ಹೂಕೋಸನ್ನು ಬೇಯಿಸಿಕೊಳ್ಳಿ. ಈರುಳ್ಳಿ ಮತ್ತು ಕ್ಯಾಪ್ಸಿಕಂ ಯನ್ನು ಸಣ್ಣಗೆ ಹೆಚ್ಚಿಕೊಳ್ಳ ಬೇಕು. ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಎಣ್ಣೆ ಕಾದ ನಂತರ ಸಾಸಿವೆ ಹಾಕಿ, ಹೆಚ್ಚಿಟ್ಟ ಹಸಿಮೆಣಸಿನಕಾಯಿ ಹಾಕಿ,ಈರುಳ್ಳಿ, ಕ್ಯಾಪ್ಸಿಕಂ ಹಾಕಬೇಕು. ಚೆನ್ನಾಗಿ ಕೆಂಪಗೆ ಫ್ರೈ ಮಾಡಿದ ನಂತರ ಬೇಯಿಸಿದ ತರಕಾರಿಗಳನ್ನು ಹಾಕಿ,ಒಂದು ಚಿಟಿಕೆ ಅರಿಶಿನ ಹಾಕಿ, ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು, ಮೇಲೆ ಹೇಳಿರುವ ಮಸಾಲೆ ಪುಡಿಗಳನ್ನು ಹಾಕಿ, ಉಪ್ಪು ಸೇರಿಸಿ ಪಲ್ಯವನ್ನು ತಯಾರು ಮಾಡ್ಡಿಕೊಳ್ಳಿ. ಕಡಲೆಹಿಟ್ಟನ್ನು ಬೋಂಡಾ ಹದಕ್ಕೆ ಕಲೆಸಿಕೊಳ್ಳು. ಬ್ರೆಡ್ಡಿನ ಅಂಚುಗಳನ್ನು ತೆಗದು ಹಾಕಿ, ನಂತರ ಹಿಟ್ಟಿನಲ್ಲಿ ಅದ್ದಿ ಮಧಕ್ಕೆ ಪಲ್ಯವನು ಇಟ್ಟು ಉಂಡೆಯಂತೆ ಮಾಡಿ. ಈಗ ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಬೋಂಡಾವನ್ನು ಹಾಕಿ ಕೆಂಪಗೆ ಕರಿಯಿರಿ. ಬ್ರೆಡ್ ಬೋಂಡಾ ರೆಡಿಯಾಯ್ತು ನೋಡಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401