ದಿನದ ಸುದ್ದಿ
ಬ್ರೇಕಿಂಗ್ ನ್ಯೂಸ್; ಕೆಸ್ಸಾರ್ಟಿಸಿ ಎಕ್ಸಾಮ್ ಮುಂದಕ್ಕೆ
ಸುದ್ದಿದಿನ ಡೆಸ್ಕ್: ಕೊಡಗು, ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆಯಿಂದ ಉಂಟಾದ ಹಿನ್ನೆಲೆಯಲ್ಲಿ ಆಗಸ್ಟ್ 25 ಮತ್ತು 26ರಂದು ನಡೆಸಲು ಉದ್ದೇಶಿಸಿದ್ದ ಕೆಎಸ್ಸಾರ್ಟಿಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿ ಮುಂದೂಡಲಾಗಿದೆ. ಅಭ್ಯರ್ಥಿಗಳು ಮನವಿ ಮಾಡಿದ್ದರು. ಇದನ್ನು ಇಲಾಖಾ ಸಚಿವರು ಪರಿಶೀಲಿಸಿ ಆದೇಶಿಸಿದ್ದರಿಂದ ಮುಂದೂಡಲಾಗಿದೆ. ಪರೀಕ್ಷೆ ನಡೆಯುವ ಮುಂದಿನ ದಿನಾಂಕವನ್ನು ಇಲಾಖೆ ವೆಬ್‌ಸೈಟ್: www.ksrtcjobs.com ಮತ್ತು ಪ್ರಕಟಣೆ ಮೂಲಕ ತಿಳಿಸಲಾಗುವುದು ಎಂದು ಹೇಳಿದೆ.