ದಿನದ ಸುದ್ದಿ
ಬ್ರೇಕಿಂಗ್ ನ್ಯೂಸ್; ಮುಂದಿನ ವರ್ಷ 10 ಲಕ್ಷ ರೈತರಿಗೆ ಸಾಲ
ಸುದ್ದಿದಿನ ಡೆಸ್ಕ್: ರಾಜ್ಯದ ಸಹಕಾರಿ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪುರ್ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಮುಂದಿನ ವರ್ಷ ಸುಮಾರು 10 ಲಕ್ಷ ರೈತರಿಗೆ ಸಾಲ ನೀಡುವ ಮೂಲಕ ಅವರು ಖಾಸಗಿಯವರಿಂದ ಸಾಲ ಪಡೆಯುವುದನ್ನು ನಿಯಂತ್ರಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆಯ ಸಹಕಾರಿ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಸಗಿ ಲೇವಾದೇವಿಗಾರರಿಂದ ರೈತರನ್ನು ಪಾರುಮಾಡಿ ಅವರಿಗೆ ಸಹಕಾರ ಸಂಘ ಹಾಗೂ ಬ್ಯಾಂಕಗಳಿಂದ ಸಾಲ ದೊರೆಯುವಂತೆ ನೊಡಿಕೊಳ್ಳಲಾಗುವುದು ಎಂದು ಸಹಕಾರಿ ಸಚಿವ ಬಂಡೆಪ್ಪ ಖಾಶೆಂಪೂರ ತಿಳಿಸಿದರು.
ಪ್ರತಿವರ್ಷ ಶೇ.25 ರಷ್ಟು ಹೊಸ ರೈತರಿಗೆ ಸಾಲ ಕೊಡಬೇಕೆಂದು ಬ್ಯಾಂಕ್ ನಿಯಾಮಾವಳಿಗಳು ಹೇಳುತ್ತವೆ. ಆದರೆ ಕೇವಲ ಶೆ.5 ರಿಂದ 10 ರಷ್ಟು ರೈತರಿಗೆ ಮಾತ್ರವೇ ಹೊಸ ಸಾಲಗಳು ದೊರೆಯುತ್ತವೆ. ಈ ಪ್ರಮಾಣ ಹೆಚ್ಚಾಗಲು ಸಹಕಾರ ಸಂಘಗಳು ಮುಂದಾಗಬೇಕೆಂದರು.
ಸಭೆಗೆ ಮಾಹಿತಿ ನೀಡಿದ ಸಹಕಾರ ಸಂಘಗಳ ಉಪ ನಿಬಂಧಕರಾದ ಎನ್. ಸುರೇಶ್, 2017-18 ನೇ ಸಾಲಿನಲ್ಲಿ ಜಿಲ್ಲೆಯ 80213 ರೈತರಿಗೆ ಸಾಲ ನೀಡಲಾಗಿದೆ. ಒಟ್ಟು ನೀಡಿರುವ ಸಾಲ ಪ್ರಮಾಣ 231 ಕೋಟಿ ರೂಪಾಯಿಗಳು. ಅದರಲ್ಲಿ 222 ಕೋಟಿ ಸಾಲ ಮನ್ನಾ ಆಗಿದೆ. ಈ ಪೈಕಿ ಸರ್ಕಾರ 198 ಕೋಟಿ ರೂ ಅನ್ನು ನೀಡಿದ್ದು, 31 ಕೋಟಿ ಬಾಕಿ ಬರಬೇಕಾಗಿದೆ. ವರ್ಷಕ್ಕೆ 4 ಬಾರಿ ಹೊಸ ಸಾಲಗಳನ್ನು ನೀಡಲಾಗುತ್ತದೆ. ಜನವರಿಯಲ್ಲಿ ಬೇಸಿಗೆ ಬೆಳೆಗಾಗಿ ಸಾಲ ನೀಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಸಾಲಕ್ಕೆ ಬೇಡಿಕೆ ಇದೆ ಎಂದರು.
ಸಾಲ ಮನ್ನಾ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗಿರುತ್ತವೆ ಮಂಡ್ಯದಲ್ಲಿ ಸಹಕಾರ ಸಂಘದ ಸೆಕ್ರೆಟರಿಯೊಬ್ಬ ಸತ್ತಿರುವ ರೈತನ ಹೆಸರಿನಲ್ಲಿ ಸಾಲಮನ್ನಾ ಮಾಡಿ ಹಣ ವಂಚಿಸಿದ್ದಾನೆ ಈ ಬಗ್ಗೆ ಎಚ್ಚರವಹಿಸಲು ಎಂದು ಸಚಿವರು ತಿಳಿಸಿದರು.
ಅಧಿಕಾರಿಗಳು ರೈತರ ಸಾಲದ ಖಾತೆಗಳೊಂದಿಗೆ ಆಧಾರ ಲಿಂಕ್ ಮಾಡುವುದರಿಂದ ಇಂತಹ ಪ್ರಕರಣಗಳು ತಡೆಗಟ್ಟಬಹುದು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401