ರಾಜಕೀಯ

ಬ್ರೇಕಿಂಗ್ ನ್ಯೂಸ್; ಮಾಜಿ, ಹಾಲಿ ಶಾಸಕರ ಹತ್ಯೆ; ನಕ್ಸಲರ ಗುಂಡಿನ ದಾಳಿ

Published

on

Pic courtesy: Tnm

ಸುದ್ದಿದಿನ ದಾವಣಗೆರೆ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರುಕು ಕಣಿವೆಯ ದುಮ್ರಿಗುಗುಡಾ ಮಂಡಲ್ ನಲ್ಲಿ ನಕ್ಸಲರ ಗುಂಡಿನ ದಾಳಿಗೆ ಇಬ್ಬರು ರಾಜಕಾರಣಿಗಳು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಹಾಲಿ ಶಾಸಕ ಕಿದಾರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಅರಕು ಶಾಸಕ ಸಿವೇರಿ ಸೋಮ ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಕ್ಸಲರು ನಡೆಸಿದ ಗುಂಡಿನ ದಾಳಿ‌ಯಲ್ಲಿ ಹತರಾಗಿದ್ದಾರೆ.

ಪಕ್ಷದ ಸಭೆಗೆ ಹಾಜರಾಗಲು ಹೋಗಿದ್ದ ವೇಳೆ ಇಬ್ಬರು ರಾಜಕಾರಣಿಗಳ ಕಾರನ್ನು ನಿಲ್ಲಿಸಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ನಡೆಸಿದ್ದರಿಂದ ದೇಹಗಳು ರಕ್ತಮಡುವಿನಲ್ಲಿ ಬಿದ್ದಿದ್ದವು. ನಕ್ಸಲರು ನಡೆಸಿದ ಗುಂಡಿನ ದಾಳಿ ದೃಶ್ಯಾವಳಿ ಸೆರೆಯಾಗಿದೆ. ಕಿದಾರಿ ಸರ್ವೇಶ್ವರ ರಾವ್ ಅವರು 2014ರಲ್ಲಿ ವೈಎಸ್ಆರ್ಸಿಪಿ ಪಕ್ಷದಿಂದ ಆಯ್ಕೆಯಾಗಿದ್ದರು. ಸರವೇಶ್ವರ ರಾವ್ ಅವರು ಹೆಸರು ನಕ್ಸಲ್ ಹಿಟ್ ಲಿಸ್ಟ್ ನಲ್ಲಿತ್ತೆಂದು ವರದಿಯಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ನ ರಚನೆಯ ದಿನ ಸೆಪ್ಟೆಂಬರ್ 21ರ ಬೆಳಗ್ಗೆ ಈ ದಾಳಿ ನಡೆದಿದೆ.

Trending

Exit mobile version