ರಾಜಕೀಯ
ಬ್ರೇಕಿಂಗ್ | ಆಪರೇಷನ್ ಕಮಲಕ್ಕೆ ಕಂಗಾಲಾದರು: ಹೆಚ್. ಡಿ.ಕೆ, ಮಾಜಿ ಪ್ರಧಾನಿ ದೇವೇಗೌಡ
ಸುದ್ದಿದಿನ, ಬೆಂಗಳೂರು : ಎಲ್ಲಾ ಶಾಸಕರನ್ನು ಒಂದೇ ಕಡೆಗೆ ಶಿಪ್ಟ್ ಮಾಡಲು ಜೆಡಿಎಸ್ ವರಿಷ್ಠರು ಪ್ಲಾನ್ ಮಾಡಿದ್ದಾರೆ. ತಮ್ಮ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ಮನವೊಲಿಸಲು ಬೆಂಗಳೂರಿಂದ ಶಿಪ್ಟ್ ಮಾಡಿದಿದ್ದಾರೆ.
ತಮ್ಮ ಪಕ್ಷದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆದಿದದ್ದು, ಹಾಸನದ ಖಾಸಗಿ ಹೋಟೆಲ್ ಗೆ ನಾಳೆ ಬೆಳಿಗ್ಗೆ ಎಲ್ಲಾ ಜೆಡಿಎಸ್ ಸಚಿವರು, ಶಾಸಕರು ಶಿಪ್ಟ್ ಆಗಲಿದ್ದಾರೆ. ನಾಳೆ ಸಂಜೆ ಜೆಡಿಎಸ್ ನ ಎಲ್ಲಾ ಶಾಸಕರ ಜೊತೆ ಹಾಸನದಲ್ಲಿ ಸೀಕ್ರೆಟ್ ಮೀಟಿಂಗ್ ನಡೆಯಲಿದೆ.
ನಾಳೆ ಸಂಜೆ ಹಾಸನಕ್ಜೆ ತೆರಳಲಿರುವ ಸಿಎಂ,ಹಾಗೇ ಇಂದು ಸಂಜೆ ಹಾಸನಕ್ಕೆ ತೆರಳಿರುವ ಮಾಜಿ ಪಿಎಂ ಹೆಚ್ ಡಿ ದೇವೇಗೌಡ. ಆಪರೇಷನ್ ಕಮಲ ಹೆಸರಿನಲ್ಲಿ ಯಾರಿಗಾದ್ರೂ ಆಮಿಷ ಒಡ್ಡಲಾಗಿದೆಯಾ ಅಂತಾ ಪರಿಶೀಲಸಿದ್ದಾರೆ ವರಿಷ್ಠರು, ಆ ರೀತಿ ಯಾರಿಗಾದರೂ ಆಮಿಷ ಒಡ್ಡಲಾಗಿದ್ರೆ ದಾಖಲೆಗಳನ್ನು ಸಂಗ್ರಹಿಸುವುದು. ಆಮಿಷಗಳಿಗೆ ಒಳಗಾಗದಂತೆ ಪಕ್ಷದ ಶಾಸಕರ ಮನವೊಲಿಸುವುದು. ಹಾಗೂ ಕಾಲ್ ರೆಕಾರ್ಡಿಂಗ್ ಸೇರಿದಂತೆ ಯಾವುದೇ ರೀತಿಯ ದಾಖಲೆ ಗಳಿದ್ರೆ ಮಾಧ್ಯಮದ ಮುಂದೆ ಬಿಡುಗಡೆ ಮಾಡಲು ತೀರ್ಮಾನ ಮಾಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401