ದಿನದ ಸುದ್ದಿ
ಬ್ರೇಕಿಂಗ್ : ಸಾಲಬಾಧೆಗೆ ಬೇಸತ್ತು ರೈತ ನೇಣಿಗೆ ಶರಣು
ಸುದ್ದಿದಿನ, ಮದ್ದೂರು : ಸಾಲಬಾಧೆಯಿಂದ ಯುವ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮಾಲಗಾರನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಲೇಟ್ ಮಲ್ಲಯ್ಯನವರ ಮಗ ರಾಜೇಶ್ ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು ಈತನಿಗೆ ಪತ್ನಿ ಪುಷ್ಪಾ ಲತಾ ಸೇರಿದಂತೆ ಓರ್ವ ಪುತ್ರ ಪುತ್ರಿಯನ್ನು ಅಗಲಿದ್ದಾರೆ. ಮೃತರು ಖಾಸಗಿ ವ್ಯಕ್ತಿಗಳಿಂದ 5ಲಕ್ಷಕ್ಕೂ ಅಧಿಕ ಕೈಸಾಲ ಮಾಡಿಕೊಂಡಿದ್ದರು,ಈ ಸಾಲ ತಿರಿಸಲಾಗದೆ ಸೋಮವಾರ ತಡರಾತ್ರಿ ತನ್ನ ಜಮೀನಿನ ಬಳಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮೃತನ ಪತ್ನಿ ಪುಷ್ಪ ಲತಾ ನೀಡಿದ ದೂರಿನ ಮೇರೆಗೆ ಮದ್ದೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401