ದಿನದ ಸುದ್ದಿ
ಸರ್ದಾರ್ ಏಕತಾ ಮೂರ್ತಿ ತೆಗಳಿದ ಇಂಗ್ಲೆಂಡ್ ಸಂಸದ; ಯಾರ್ವರು, ಏನಂದ್ರು ಇಲ್ಲಿದೆ ಡಿಟೇಲ್ಸ್?
ಸುದ್ದಿದಿನ ದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ ಲೋಕಾರ್ಪಣೆ ಗೊಂಡಿದ್ದ ಭಾರತದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಮೂರ್ತಿ ಬಗ್ಗೆ ಇಂಗ್ಲೆಂಡಿನ ಸಂಸದನೊಬ್ಬ ಅವಹೇಳನಕಾರಿ ಹೇಳಿಕೆ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದ್ರೆ ಆ ಸಂಸದ ಏನೆಂದು ಹೇಳಿಕೆ ನೀಡಿದ್ದಾರೆ. ಇಲ್ಲಿದೆ ಡಿಟೇಲ್ಸ್ ಓದಿ..!?
ಅಖಂಡ ಭಾರತದ ಏಕತೆಗೆ ಶ್ರಮಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಗುಜರಾತಿನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟಿನ ಎದುರು 600 ಅಡಿ ಎತ್ತರದ ಏಕತಾ ಮೂರ್ತಿ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಮೂರ್ತಿಯನ್ನು ಇಂಗ್ಲೆಂಡಿನ ಸಂಸತ್ ಸದಸ್ಯ ಪೀಟರ್ ಬೋನ್ ‘ಟೋಟಲ್ ನಾನ್ಸೆನ್ಸ್’ ತೆಗಳಿದ್ದಾರೆ.
ಸಂಸದ ಪೀಟರ್ ಬೋನ್ಸ್ ಮುಂದುವರಿದ ಮಾತನಾಡಿ, “ಅವರು (ಭಾರತ) ಹಣವನ್ನು ಹೇಗೆ ಖರ್ಚು ಮಾಡುತ್ತಾರೆ. ಆದರೆ, ಬೃಹತ್ ಮೊತ್ತದಲ್ಲಿ ಮೂರ್ತಿ ನಿರ್ಮಿಸಿ, ನಿಭಾಯಿಸುತ್ತಾರೆ ಎಂದಾದರೆ ನಾವು ಅವರಿಗೆ (ಭಾರತಕ್ಕೆ) ನೆರವು ನೀಡಬೇಕಾಗಿಲ್ಲ ಎಂದು ವಿರೋಧ ವ್ಯಕ್ತಪಡಿಸುದ್ದಾರೆ.
ಕಳೆದ ವರ್ಷಗಳಲ್ಲಿ ಇಂಗ್ಲೆಂಡ್ ಭಾರತಕ್ಕೆ 9492 ಕೋಟಿ ರೂ. (1.17 ಬಿಲಿಯನ್ ಪೌಂಡ್ಸ್ ಹಣಕಾಸಿನ ನೆರವು ನೀಡಿದೆ. ಇಷ್ಟು ದೊಡ್ಡ ಮೊತ್ತವು ಮಹಿಳಾ ಹಕ್ಕು, ಸಾಮಾಜಿಕ ಸಮಸ್ಯೆ, ನವೀಕರಿಸಬಹುದಾದ ಇಂಧನ ಶಕ್ತಿ ಯೋಜನೆ ಸೇರಿದಂತೆ ವಿವಿಧ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗಿತ್ತು. ಆದರೆ, ಭಾರತೀಯರ ಕಲ್ಯಾಣಕ್ಕೆ ನೆರವು ನೀಡಿದ್ದೆ ಹೊರತು 2000 ಟನ್ನಿನ ಸ್ಟ್ಯಾಚ್ಯುಗೆ ಅಲ್ಲ ಎಂದು ವಿರೋಧಿದಿದ್ದಾರೆ.
ಏಕತಾ ಮೂರ್ತಿಯನ್ನು ಟೋಟಲ್ ಮ್ಯಾಡ್ನೆಸ್ ಎಂದು ತೆಗಳಿರುವ ಬ್ರಿಟಿಷ್ ಸಂಸದ, 3000 ಕೋಟಿ ರೂ. ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸಬಹುದಿತ್ತು. 2989 ಕೋಟಿ ರೂ. ಮೊತ್ತದಲ್ಲಿ ಒಂದು ಮೂರ್ತಿ ನಿರ್ಮಿಸಲು ಸಾಧ್ಯವಿದೆ ಎಂದಾದರೆ ವಿದೇಶಿ ನೆರವು ಅಗತ್ಯವಿರಲಿಲ್ಲ ಎಂದ ಸಂಸದ ಬೋನ್, ಏಕತಾ ಮೂರ್ತಿ ನಿರ್ಮಾಣಕ್ಕೆ ಇಂಗ್ಲೆಂಡಿನಲ್ಲಿ ಮೊದಲು ವಿರೋಧ ವ್ಯಕ್ತವಾಗಿತ್ತು ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.