ದಿನದ ಸುದ್ದಿ

ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ

Published

on

ಸುದ್ದಿದಿನ,ದಾವಣಗೆರೆ:ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಮತ್ತು ನೀಲಾನಹಳ್ಳಿ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಎರಡನೇ ದಿನದ ಎನ್.ಎಸ್.ಎಸ್.ಶಿಬಿರದ ಕಾರ್ಯಕ್ರಮ ಗುರುವಾರ (ಏ.10)ರಂದು ಜರುಗಿತು.

2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರೊ. ಮಂಜುನಾಥ ಜಿ. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು, ಬಾಬಾಸಾಹೇಬ್ ಅಂಬೇಡ್ಕರ್ ಶತಮಾನೋತ್ಸವ ಪದವಿ ಕಾಲೇಜ್ ಹರಿಹರ, ಇವರು
“ಸಂವಹನ ಕೌಶಲ್ಯ ಹಾಗೂ ಎನ್. ಎಸ್. ಎಸ್. ಮತ್ತು ಯುವಜನತೆ” ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಧುಶ್ರೀನಿವಾಸ ಟಿ., ಕೆ.ಸಿ.ಎಸ್. ಸಹಕಾರ ಸಂಘಗಳ ಉಪ ನಿಬಂಧಕರು, ದಾವಣಗೆರೆ ಜಿಲ್ಲೆ, ಸಹಕಾರ ಸಂಘಗಳ ಮಹತ್ವ ಬಗ್ಗೆ ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳ ತಿಳಿಸಿದರು.

ಪ್ರೊ. ಮಾರುತಿ ಶಾಲೆಮನೆ, ಕಿರುಚಿತ್ರ ನಿರ್ದೇಶಕರು ಮತ್ತು ಕನ್ನಡ ಉಪನ್ಯಾಸಕರ ವಿಷಯ : ‘ಮಾನವೀಯತೆಯ ಮಹಾವೀರ’ ಕುರಿತು ಮಾತನಾಡಿದರು.

ನಂತರ ಉಪನ್ಯಾಸದ ಕಾರ್ಯಕ್ರಮವನ್ನು ಪ್ರೊ. ಸೌಮ್ಯ ಬಿ., ಎನ್.ಎಸ್.ಎಸ್ ಅಧಿಕಾರಿಗಳು, ಉಪನ್ಯಾಸಕರು, ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ದಾವಣಗೆರೆ. ಇವರು
ವಿಷಯ : ‘ಮಹಿಳೆ ಮತ್ತು ಸ್ವಾವಲಂಬನೆ’ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರೇಖಾ ಹೆಚ್.ಜಿ., ವಿಭಾಗದ ಮುಖ್ಯಸ್ಥರು ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ವಿಭಾಗ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಡಿ.ಆರ್.ವಿಶ್ವನಾಥ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಹೊನ್ನಾಳಿ.
ನೀಲಾನಹಳ್ಳಿ ಗ್ರಾಮದ ಮುಖಂಡರಾದ ಸುಭಾಷ್ ಜೆ, ವಿರುಪಾಕ್ಷಪ್ಪ. ಕೆ. ಎನ್. ಡಿ.ರಾಜಪ್ಪ ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ವನ್ನು ಶಿಬಿರಾರ್ಥಿಗಳಾದ ಶ್ರೇಯಾ ಪ್ರಾರ್ಥಿಸಿದರು, ನಿರೂಪಣೆಯನ್ನು ನೇಹ, ಸ್ವಾಗತವನ್ನು ಸುಚಿತ್ರ ಹಾಗೂ ವಂದನಾರ್ಪಣೆಯನ್ನು ಆಕಾಶ್ ಮಾಡಿದರು.

ಎನ್.ಎಸ್ ಎಸ್. ಕಾರ್ಯಕ್ರಮದ ಅಧಿಕಾರಿಗಳಾದ ಪ್ರೊಫೆಸರ್ ಅಣ್ಣೇಶ್. ಪಿ ಮತ್ತು ಶ್ರೀಮತಿ ಅನುಷಾ. ಎಸ್. ಹೆಚ್. ಕಾರ್ಯಕ್ರಮವನ್ನು ನಿರ್ವಹಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version