ರಾಜಕೀಯ

ಬಿ ಎಸ್ ಪಿ ಮತ್ತೆ ಸರ್ಕಾರ ರಚಿಸಲಿದೆ : ಮಾಯಾವತಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಲಕ್ನೋ : ನಮ್ಮ ಬಿಎಸ್‍ಪಿ ಗೆ 2007ರಂತೆಯೇ ಪೂರ್ಣ ಪ್ರಮಾಣದ ಬಹುಮತ‌ಪಡೆದು ಸರ್ಕಾರವನ್ನು ರಚಿಸಲಿದ್ದು, ಸಮಾಜದ ಎಲ್ಲ ಜನಾಂಗದವರಿಂರಿಂದ ಬೆಂಬಲ ಸಿಗಲಿದೆ ಎಂದು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಆಶಾವಾದ ವ್ಯಕ್ತಪಡಿಸಿದರು.

ಸಮಾಜವಾದಿ ಪಕ್ಷದ ಕಾರ್ಯ ವೈಖರಿಯಿಂದ ಮುಸ್ಲಿಮರು ಅಸಮಾಧಾನಗೊಂಡಿದ್ದು, ಬಿಎಸ್‍ಪಿಗೆ ದಲಿತರಷ್ಟೇಅಲ್ಲದೆ ಮುಸ್ಲಿಂ, ಹಿಂದುಳಿದ ವರ್ಗ ಮತ್ತು ಮೇಲ್ಜಾತಿಯರ ಬೆಂಬಲವೂ ಇದೆ. ಸಮಾಜವಾದಿ ಪಕ್ಷವು ಸರ್ಕಾರ ರಚಿಸುವ ಕನಸು ಕಾಣುತ್ತಿದೆ. ಆದರೆ ಆ ಕನಸು ಭಗ್ನವಾಗಲಿದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ಅವರ ದೊಡ್ಡತನ ಎಂದು ಮೆಚ್ಚುಗೆಯ ಮಾತನಾಡಿದರು.

ಬಿಎಸ್‍ಪಿಯು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದು. ಆ ಪಕ್ಷಕ್ಕೆ ಸಂಪೂರ್ಣ ಬೆಂಬಲ ಸಿಗುವ ನಂಬಿಕೆಯಿದೆ. ಆದರೆ ಎಷ್ಟು ಸೀಟುಗಳಾಗಿ ಪರಿವರ್ತನೆಯಾಗಲಿದೆ ಎಂಬುದು ಗೊತ್ತಿಲ್ಲ ಎಂದು ಈ ಅಮಿತ್ ಶಾ ಹೇಳಿದ್ದರು. ಈ ಹೇಳಿಕೆ ಕುರಿತಾಗಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಮಾಯಾವತಿ ಅವರು ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ಅವರ ದೊಡ್ಡತನ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version