ದಿನದ ಸುದ್ದಿ
ದೇಶದ್ಯಾಂತ ಇಂದು ಬುದ್ಧ ಪೂರ್ಣಿಮೆ ಆಚರಣೆ ; ಗೌತಮ ಬುದ್ಧನ ಸತ್ಯ, ಧರ್ಮ ಬೋಧನೆ ಸ್ಮರಣೆ
ಸುದ್ದಿದಿನ ಡೆಸ್ಕ್ : ದೇಶಾದ್ಯಂತ ಇಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತಿದೆ. ಈ ದಿನ ಗೌತಮ ಬುದ್ಧ ಜನಿಸಿದ ದಿನ ಮಾತ್ರವಲ್ಲ ಅವರು ನಿರ್ವಾಣ ಗೈದ ದಿನವೂ ಆಗಿದೆ.
ಭಗವಾನ್ ಬುದ್ಧ ನೇಪಾಳದ ಲುಂಬಿನಿಯಲ್ಲಿ ಕ್ರಿಸ್ತ ಪೂರ್ವ 563ರಲ್ಲಿ ಹುಣ್ಣಿಮೆಯ ದಿನದಂದು ರಾಜಕುಮಾರ ಸಿದ್ಧಾರ್ಥ ಗೌತಮನಾಗಿ ಜನ್ಮತಾಳಿದರು. ಬುದ್ಧ ಜಯಂತಿಯನ್ನು ವೈಸಾಖಿ ಬುದ್ಧ ಪೂರ್ಣಿಮಾ ಅಥವಾ ವೇಸಕ್ ಎಂದು ಕೂಡಾ ಕರೆಯಲಾಗುತ್ತದೆ.
ಬೌದ್ಧ ಧರ್ಮೀಯರಿಗೆ ಹುಣ್ಣಿಮೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ರಾಜಕುಮಾರ ಸಿದ್ಧಾರ್ಥ ಹುಣ್ಣಿಮೆಯ ದಿನದಂದು ಜನಿಸಿ, ಬೋಧಿ ವೃಕ್ಷದ ಅಡಿಯಲ್ಲಿ ಜ್ಞಾನೋದಯ ಹೊಂದಿ ಗೌತಮ ಬುದ್ಧನಾಗಿ 45ವರ್ಷಗಳ ಕಾಲ ಜನತೆಗೆ ಸತ್ಯ, ಧರ್ಮ ಬೋಧಿಸಿದರು.
ತಮ್ಮ 80ನೇ ವಯಸ್ಸಿನಲ್ಲಿ ಮೇ ತಿಂಗಳ ಹುಣ್ಣಿಮೆಯಂದು ಕುಸಿನಾರಾದಲ್ಲಿ ಮರಣಹೊಂದಿದರು. ವಿಶ್ವಾದ್ಯಂತ ಇಂದು ಹಿಂದೂಗಳು ಹಾಗೂ ಬೌದ್ಧ ಧರ್ಮೀಯರು ಬುದ್ಧ ಜಯಂತಿ ಆಚರಿಸುತ್ತಾರೆ. ಭಾರತ, ನೇಪಾಳ್, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೈನಾ, ಲಾವೋಸ್, ಕೊರಿಯಾ, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪೂರ್, ಇಂಡೋನೇಷಿಯಾ ಮತ್ತು ಶ್ರೀಲಂಕಾದಲ್ಲಿ ಈ ದಿನವನ್ನು ಹಬ್ಬವನ್ನಾಗಿ ಆಚರಿಸಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243