ದಿನದ ಸುದ್ದಿ
ವಿಡಿಯೋ | ವಿಶ್ವ ಪ್ರಸಿದ್ಧ ‘ಬುದ್ಧ ಮಲಗಿದ ದೃಶ್ಯತಾಣ’ದ ಅಭಿವೃದ್ಧಿ ಕಾರ್ಯದಲ್ಲಿ ಪ್ರವಾಸೋದ್ಯಮ ಇಲಾಖೆ ಗೋಲ್ ಮಾಲ್..!
- ವರದಿ : ನಿಂಗಣ್ಣ.ಕೆ
ಸುದ್ದಿದಿನ,ಯಾದಗಿರಿ : ಶಹಾಪುರ ನಗರದ ಬೆಟ್ಟದಲ್ಲಿ ಕಾಣುವ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯದ ತಾಣ ಅಭಿವೃದ್ಧಿಗೆ ಹಿಂದಿನ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಕ್ರಿಯಾಯೋಜನೆ ರೂಪಿಸಿ ಅಂದಾಜು 5 ಕೋಟಿ ಅನುದಾನ ಬೇಡಿಕೆ ಸಲ್ಲಿಸಿತ್ತು. ಬೇಡಿಕೆಯಂತೆ ಅಂದಿನ ಸರ್ಕಾರ 5 ಕೋಟಿ ಅನುದಾನ ಬಿಡುಗಡೆಗೊಳಿಸಲು ಅನುಮೋದನೆ ನೀಡಿತ್ತು ಅದರಲ್ಲಿ 4.30 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು.
ಬಿಡುಗಡೆಗೊಂಡ ಹಣದಲ್ಲಿ ನಗರದ ಮಾವಿನ ಕೆರೆ ಅಭಿವೃದ್ಧಿ ಮಾಡುತ್ತೇವೆ ಎಂದು ಕೇವಲ ಕೆರೆ ಬದು ನಿರ್ಮಾಣ ಮಾಡಿ ಒಂದಿಷ್ಟು ವಾಕಿಂಗ್ ಫೂಟ್ ನಿರ್ಮಿಸಿ ಎರಡು ಬದಿ ಸಸಿಗಳನ್ನು ನೆಟ್ಟು, ನಂತರ ಅದು ಸಮರ್ಪಕ ನಿರ್ವಹಣೆ ಮಾಡದೆ ಸಂಪೂರ್ಣ ಹಾಳುಗೆಡುವಿದ್ದಾರೆ. ಅಲ್ಲದೆ ಮುಖ್ಯವಾಗಿ ಬಿಡುಗಡೆಗೊಂಡ ಹಣ ಪೂರ್ಣ ಪ್ರಮಾಣ ಖರ್ಚು ಮಾಡದೇ ಕೇವಲ ಅದರಲ್ಲಿ 30 ಲಕ್ಷ ರೂ. ಮಾತ್ರ ಕೆರೆ ಬದು ನಿರ್ಮಾಣ, ಸಸಿಗಳನ್ನು ನಿರ್ಮಿಸಲು ಖರ್ಚು ಮಾಡಿದ್ದಾರೆ. ಇನ್ನುಳಿದ 4 ಕೋಟಿ ಹಣ ಎಲ್ಲಿಗೇ ಹೋಯಿತು ಎಂಬುದರ ಮಾಹಿತಿ ಪ್ರವಾಸೋಧ್ಯಮ ಇಲಾಖೆ ನೀಡಬೇಕಿದೆ.ಕ್ರಿಯಾಯೋಜನೆಯಂತೆ ಯಾವುದೇ ಕಾಮಗಾರಿ ಸ್ಥಳದಲ್ಲಿ ನಡೆದಿರುವದಿಲ್ಲ ಎಂದು ಶಹಾಪುರ ನಾಗರಿಕ ಹೋರಾಟ ಒಕ್ಕೂಟ ಸಮಿತಿ ಮುಖಂಡ ಗುರು ಕಾಮ ಎಂದು ಆರೋಪಿಸಿದ್ದಾರೆ.
ಅಲ್ಪಸ್ವಲ್ಪ ಕಾಮಗಾರಿ ಮಾಡಿ
ಕೈತೊಳೆದುಕೊಂಡಿರುವುದು ಕಣ್ಣಿಗೆ ಕಾಣುತ್ತಿದೆ.ಹೀಗಾಗಿ ಬುದ್ಧ ಮಲಗಿದ ದೃಶ್ಯ ಅಭಿವೃದ್ಧಿಗೆ ಬಂದ ಹಣದ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಬೇಕು. ಕೂಡಲೇ ಅಭಿವೃದ್ಧಿ ಕಾಮಗಾರಿಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243