/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಬುಲೆಟ್ ರೈಲು

Published

on

ಸುದ್ದಿದಿನ ಡೆಸ್ಕ್: ಪಾನ್ ಸಹಯೋಗದಲ್ಲಿ ಕೈಗೆತ್ತಿಕೊಂಡಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ನ್ಯಾಷನಲ್‌ ಹೈಸ್ಪೀಡ್ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಸಾಬರಮತಿ ಬಳಿ ರೈಲ್ವೆ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.

ಸಾಬರಮತಿ ಹಳೇ ನಿಲ್ದಾಣ ಮತ್ತು ಹೊಸ ನಿಲ್ದಾಣಗಳ ನಡುವೆ ಬುಲೆಟ್ ರೈಲು ನಿಲ್ದಾಣ ನಿರ್ಮಿಸಲಾಗುತ್ತಿದೆ.

ಒಟ್ಟು 1.1 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬುಲೆಟ್ ರೈಲು ಮಾರ್ಗ ಒಟ್ಟು 508 ಕಿ.ಮೀ. ಉದ್ದವಿದೆ. * ಕಾಮಗಾರಿ ಪೂರ್ಣಗೊಂಡ ನಂತರ ಸಾಬರಮತಿ- ಮುಂಬೈ ನಡುವಿನ ಸಂಚಾರ ಕೇವಲ 2 ಗಂಟೆಗೆ ಇಳಿಯಲಿದೆ.

ಬುಲೆಟ್ ರೈಲಿನ ಪ್ರಮುಖ ಮಾಹಿತಿಗಳು

2017ರ ಸೆಪ್ಟೆಂಬರ್ 14ರಂದು ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಂದ ಶಂಕುಸ್ಥಾಪನೆ.

2018ರ ಜೂನ್‌ನಿಂದ ಕಾಮಗಾರಿ ಆರಂಭಿಸುವ ಗುರಿ.

2022ರ ಆಗಸ್ಟ್ 15ರ (ಸ್ವಾತಂತ್ರ್ಯ ದಿನದ 75ನೇ ವಾರ್ಷಿಕೋತ್ಸವ ವೇಳೆಗೆ) ಕಾಮಗಾರಿ ಪೂರ್ಣಗೊಳಿ ಸುವಗುರಿ. ಈ ಮೊದಲು 2023ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು.

ಆರಂಭದಲ್ಲಿ ಒಂದು ಟೈನ್‌ನಲ್ಲಿ 750 ಪ್ರಯಾಣಿಕರು ಸಂಚರಿಸಬಹುದು. ನಂತರದಲ್ಲಿ ಪ್ರಯಾಣಿಕರ ಗರಿಷ್ಠ ಸಾಮರ್ಥ್ಯವನ್ನು 1250ಕ್ಕೆ ಹೆಚ್ಚಿಸಲಾಗುತ್ತದೆ.

ಪ್ರತಿ ಗಂಟೆಗೆ ಸರಾಸರಿ 320 ಕಿ.ಮೀ. ವೇಗದಲ್ಲಿ ಚಲನೆ. ಗರಿಷ್ಠ ವೇಗ ಗಂಟೆಗೆ 350 ಕಿ.ಮೀ. ಬುಲೆಟ್ ರೈಲು ಮಾರ್ಗ ಒಟ್ಟು 12 ನಿಲ್ದಾಣಗಳನ್ನು ಹೊಂದಿರಲಿದೆ.

ಸಾಬರಮತಿ- ಮುಂಬೈ ನಡುವೆ ಫಾಸ್ಟ್ ರೈಲಿನಲ್ಲಾದರೆ ಕೇವಲ 2 ಗಂಟೆ 7 – ನಿಮಿಷದಲ್ಲಿ ತಲುಪಬಹುದು.12 ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ ಪ್ರಯಾಣಿಸಿದರೆ 2 ಗಂಟೆ 58 ನಿಮಿಷ ಬೇಕಾಗುತ್ತದೆ.

ಜಪಾನ್ ಸಹಕಾರ:

1.1 ಲಕ್ಷ ಕೋಟಿ ಮೌಲ್ಯದ ಈ ಬುಲೆಟ್ ಟೈನ್ ಯೋಜನೆಯನ್ನು ಭಾರತೀಯ ರೈಲ್ವೆ ಮತ್ತು ಜಪಾನಿನ ಶಿಂಕನ್ಸೆನ್ ಟೆಕ್ನಾಲಜಿಯ ಜಂಟಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

2023 ರೊಳಗೆ ಯೋಜನೆ ಮುಗಿಸಿಕೊಡುವುದಾಗಿ ಜಪಾನ್ ತಂಡ ತಿಳಿಸಿತ್ತು.

ಆದರೆ, 2022 ಆಗಸ್ಟ್ 15ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರತೆ 75ನೇ ವರ್ಷದ ಸಂಭ್ರಮಾಚರಣೆ ಆಗಿರುವ ಕಾರಣ, ಆ ಅವಧಿಯೊಳಗೆ ಯೋಜನೆಯನ್ನು ಸಂಪೂರ್ಣ ಮುಕ್ತಾಯಗೊಳಿಸುವುದು ಪ್ರಧಾನಿ ಮೋದಿ ಇಂಗಿತವಾಗಿದೆ.

ಈ ಯೋಜನೆಗೆ ಜಪಾನ್ ಶೇ.81 ರಷ್ಟು ಹಣ ನೀಡಲಿದೆ.

ಸುಮಾರು 88,000 ಕೋಟಿ ರೂಪಾಯಿಯನ್ನು ಜಪಾನ್ ಸಾಲದ ರೂಪದಲ್ಲಿ ನೀಡಲಿದೆ.

ಇದಕ್ಕೆ ಕೇವಲ ಶೇ. 0.1ರಷ್ಟು ಮಾತ್ರ ಬಡ್ಡಿ ವಿಧಿಸಲಾಗುತ್ತದೆ.

ಈ ಸಾಲವನ್ನು ಮುಂದಿನ 50 ವರ್ಷಗಳೊಳಗೆ ಮರುಪಾವತಿಸಬೇಕು.

ಈ ಬುಲೆಟ್ ರೈಲು ಗುಜರಾತ್ ಮತ್ತು ಮಹಾರಾಷ್ಟ್ರ ನಡುವೆ ಓಡಾಡಲಿದ್ದು, ಪ್ರಸ್ತುತ ಈ ಅಂತರದ ಸಂಚಾರಕ್ಕೆ 8 ಗಂಟೆ ಬೇಕಿತ್ತು.

ಈ ಅವಧಿ ಬುಲೆಟ್ ಟೈನ್ ಮೂಲಕ ಕೇವಲ 2 ಗಂಟೆಗೆ ಇಳಿಯಲಿದೆ.

ಬುಲೆಟ್ ಟೈನ್‌ನಲ್ಲಿ ಪ್ರಯಾಣಿಸಲು ಟಿಕೆಟ್ ಬೆಲೆ 1500 ರೂ

Leave a Reply

Your email address will not be published. Required fields are marked *

Trending

Exit mobile version