ದಿನದ ಸುದ್ದಿ

ವ್ಯಕ್ತಿಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಬಸ್​: ವಾಟರ್​ಮ್ಯಾನ್​ ಸಾವು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಮಂಡ್ಯ: ಕರ್ತವ್ಯ ನಿರ್ವಹಿಸಲು ಹೋಗುತ್ತಿದ್ದ ವಾಟರ್ ಮ್ಯಾನ್​ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ವಾಟರ್ ಮ್ಯಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಮಳವಳ್ಳಿ ಪಟ್ಟಣದ ಮಳವಳ್ಳಿ-ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದೆ. ಮಾದೇಶ್ (48) ಮೃತ ಪಟ್ಟ ದುದೈವಿ. ಸರ್ವಮಂಗಳ, ನಾಗರತ್ನ, ಶೃತಿ, ಮಹದೇವಮ್ಮ ಗಾಯಗೊಂಡವರು. ವಾಟರ್ ಮ್ಯಾನ್​ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್,​ ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಬಳಿಕ ರಸ್ತೆ ಪಕ್ಕದಲ್ಲಿರುವ ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮನೆಯಲ್ಲಿ ಮಲಗಿದ್ದ ಸರ್ವಮಂಗಳ ಹಾಗೂ ನಾಗರತ್ನ ಎಂಬವರಿಗೆ ಗಂಭೀರ ಗಾಯಗಳಾಗಿವೆ.

ಇನ್ನು ಬಸ್​ನಲ್ಲಿದ್ದ ಮಹದೇವಮ್ಮ, ಶೃತಿ ಎಂಬುವರಿಗೂ ಗಂಭೀರ ಗಾಯಗಳಾಗಿದ್ದು, ಮಳವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಳವಳ್ಳಿ
ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Trending

Exit mobile version