ದಿನದ ಸುದ್ದಿ

ಬಸ್, ಓಮಿನಿಕಾರ್ ಡಿಕ್ಕಿ : ಒಂದೇ ಕುಟಂಬದ ಮೂವರ ದುರ್ಮರಣ

Published

on

ಸುದ್ದಿದಿನ,ಹಾಸನ: ಕೆಎಸ್ಆರ್​ಟಿಸಿ ಬಸ್​ ಮತ್ತು ಓಮಿನಿ ಕಾರಿನ ​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಸೀಕೆರೆ ತಾಲೂಕಿನ ಲಕ್ಷೀದೇವರಹಳ್ಳಿಯಲ್ಲಿ ನಿನ್ನೆ ತಡರಾತ್ರಿ 1:30ರ ವೇಳೆಗೆ ಈ ಘಟನೆ ನಡೆದಿದೆ.

ಮುಜೀಬಾ(53) ಪುತ್ರ ಮಹಮದ್ ಸಾಧಿಖ್(22) ಹಾಗೂ ಮಗಳು ಮುಸ್ಕಾನ್(19) ಮೃತ ದುರ್ದೈವಿಗಳು. ಗಾಯಾಳುಗಳನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version