ರಾಜಕೀಯ

ಬ್ರೇಕಿಂಗ್: ಸಾರಿಗೆ ಸಚಿವರ ತವರಲ್ಲೇ ಬಸ್ಸಿಗಾಗಿ ಪರದಾಟ !

Published

on

ಸುದ್ದಿದಿನ, ಮಂಡ್ಯ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ತವರು ಕ್ಷೇತ್ರದಲ್ಲೇ ಜನ ಬಸ್ ಸೌಲಭ್ಯಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಅವ್ಯವಸ್ಥೆ ಕುರಿತು ಇಲ್ಲಿನ ಜನ ಹಲವು ಬಾರಿ ಪ್ರತಿಭಟನೆ ನಡೆಸಿಸಿದರೂ ಉಪಯೋಗವಾಗಿಲ್ಲ.

ಶನಿವಾರ ಮದ್ದೂರಿನ ಸರ್ಕಾರಿ ಬಸ್ ಸ್ಟಾಂಡ್ ಮುಂಭಾಗದ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ವಿದ್ಯಾರ್ಥಿಗಳು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ವಿರದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮದ್ದೂರು ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಕಲ್ಪಿಸದ ಸಾರಿಗೆ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದ್ದಾರೆ. ಕ್ಷೇತ್ರದ ಶಾಸಕರೇ ಸಾರಿಗೆ ಸಚಿವರಾದರೂ ಮದ್ದೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಗಳು ಸಿಗುತ್ತಿಲ್ಲ. ಇದರಿಂದ ಶಾಲೆ ಕಾಲೇಜಿನ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

‘ಪ್ರಜಾಪ್ರಭುತ್ವ ವಿರೋಧಿ’ ಮೋದಿ ಸರ್ಕಾರ : ಖರ್ಗೆ ಕಿಡಿ

ಸಾರಿಗೆ ಸಚಿವರ ವಿರುದ್ಧ ಪ್ರತಿಭಟನೆ ಮೊದಲಲ್ಲ

ಮಂಡ್ಯ ಜಿಲ್ಲೆಯ ಕೆಲವು ಗ್ರಾಮಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಲಭ್ಯವಾಗಿಲ್ಲ. ಈ ಕುರಿತು ಜನ ಅಧಿಕಾರಿಗಳು ಹಾಗೂ ಜನಪ್ರತಿನಿಧಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದೇ 13ರಂದು ಮಳವಳ್ಳಿ ಕ್ಷೇತ್ರದ ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯಕ್ಕೆ ಆಗ್ರಹಿಸಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published. Required fields are marked *

Trending

Exit mobile version