/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದು ಅನಿವಾರ್ಯ : ಸಚಿವ ಡಿ.ಸಿ.ತಮ್ಮಣ್ಣ

Published

on

ಸುದ್ದಿದಿನ, ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಉಂಟಾಗಿದೆ. “ಬಸ್ ಟಿಕೆಟ್ ದರ ಹೆಚ್ಚಳ ಮಾಡೋದು ಅನಿವಾರ್ಯವಾಗಿದ್ದು, ಕಾರಣ ದಿನೇ ದಿನೇ ಡಿಸೇಲ್ ಬೆಲೆ ಏರಿಕೆ ಆಗಿರುವುದು.

ಆದ್ದರಿಂದ ಟಿಕೆಟ್ ಹೆಚ್ಚಳ ಮಾಡದೇ ವಿಧಿಯೇ ಇಲ್ಲ. 18% ಹೆಚ್ಚಳ ಮಾಡುವ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ. ಈ ವಾರದಲ್ಲಿ ಸಿಎಂ ಜೊತೆ ಅಂತಿಮ ನಿರ್ಧಾರ ಮಾಡಿ ಟಿಕೆಟ್ ಏರಿಕೆ ಮಾಡಲಾಗುವುದು” ಎಂದು ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ಗಣೇಶ ಹಬ್ಬಕ್ಕೆ ಬಸ್ ದರ ಹೆಚ್ಚಳವಿಲ್ಲ

ಗಣೇಶ ಹಬ್ಬಕ್ಕೆ ಬಸ್ ದರ ಹೆಚ್ಚಳವಿಲ್ಲ. ಸರ್ಕಾರಿ ಬಸ್ ದರ ಹೆಚ್ಚಳ ಮಾಡೋದಿಲ್ಲ. ಆದರೆ ಖಾಸಗಿ ಅವ್ರು ಹೆಚ್ಚಳ ಮಾಡ್ತಾರೆ. ಹೀಗಾಗಿ ನಮ್ಮ ಅಧಿಕಾರಿಗಳಿಗ ಹೆಚ್ಚು ಬಸ್ ಸೇವೆ ಒದಗಿಸಿ ಅಂತ ಸೂಚನೆ ನೀಡಿದ್ದೇನೆ. ಅಗತ್ಯ ಇರುವ ಜಿಲ್ಲೆಗಳಿಗೆ ಸರ್ಕಾರದಿಂದಲೇ ಹೆಚ್ಚು ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ‌ ಖಾಸಗಿ ಅವರಿಗೆ ಕಡಿವಾಣ ಹಾಕಲಾಗುತ್ತದೆ‌ ಎಂದು ತಿಳಿಸಿ್ರರು.

ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ

ಖಾಸಗಿ ಬಸ್ ಗಳ ಮಾಲೀಕರ ಜೊತೆ ಸಾರಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ. ಇದನ್ನೂ ಹಂತ ಹಂತವಾಗಿ ಕಡಿವಾಣ ಹಾಕುತ್ತೇವೆ. ಅಧಿಕಾರಿಗಳು ಮತ್ತು ಖಾಸಗಿ ಬಸ್ ಗಳ ಮಾಲೀಕರ ನಡುವೆ ಇದು ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದನ್ನ ತಕ್ಷಣ ಸರಿ ಮಾಡುತ್ತೇವೆ ಅನ್ನೋದು ಕಷ್ಟ. ಹಂತ ಹಂತವಾಗಿ ಕಡಿವಾಣ ಹಾಕುತ್ತೇವೆ‌ ಎಂದು ಎಚ್ಚರಿಕೆ ನೀಡಿದರು.

ಉಚಿತ ಬಸ್ ಪಾಸ್ ಇಲ್ಲ

ಈ ವರ್ಷ ಉಚಿತ ಬಸ್ ಪಾಸ್‌ ಇರುವುದಿಲ್ಲ.
ಈಗಾಗಲೇ ಪಾಸ್ ತೆಗೆದುಕೊಂಡವರಿಗೂ ಕೂಡ ಉಚಿತ ಬಸ್ ಪಾಸ್ ಸಿಗುವುದಿಲ್ಲ.ಇನ್ನೂ ಬಸ್ ಪಾಸ್ ತೆಗೆದುಕೊಳ್ಳದವರಿಗೆ ಉಚಿತ ಬಸ್ ಪಾಸ್ ಸಿಗಬಹುದು.ಅತೀ ಶೀಘ್ರದಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ‌ ಎಂದು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version