/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಬಿ.ವೈ ರಾಘವೇಂದ್ರ ಡಮ್ಮಿ ಕ್ಯಾಂಡಿಡೇಟ್; ಸಿದ್ದರಾಮಯ್ಯ ಟೀಕೆ

Published

on

ಸುದ್ದಿದಿನ ಬಾಗಲಕೋಟೆ: ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ಚಿಕ್ಕಲಕಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಿ, ಮತ ಯಾಚಿಸಿದರು.

ಮರು ಚುನಾವಣೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದೆ. ಶಿವಮೊಗ್ಗದಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಜಿಲ್ಲೆಯಲ್ಲಿ ಮಧು ಬಂಗಾರಪ್ಪ ಪರವಾಗಿ ಕಂಡುಬರುತ್ತಿರುವ ಜನಸ್ಪಂದನೆ ಗಮನಿಸಿದರೆ, ಯಡಿಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ಅವರೇ ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟ್ ಎಂದು ಅನಿಸುತ್ತಿದೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಎನ್ನುವ ಯಡಿಯೂರಪ್ಪನವರು ಈ ಹಿಂದೆ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿರಲಿಲ್ಲವೇ? ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಮಾಡಿ ನಮ್ಮಪ್ಪನಾಣೆ ಬಿಜೆಪಿ ಸೇರಲ್ಲ ಎಂದಿದ್ದರು, ಯಡಿಯೂರಪ್ಪ ಪಕ್ಷ ತೊರೆದಾಗ ಪಕ್ಷದಿಂದ ಶನಿ ಹೋಯಿತು ಎಂದು ಈಶ್ವರಪ್ಪನವರು ಹೇಳಿರಲಿಲ್ಲವೇ? ಈಗವರು ಒಂದಾಗಿಲ್ಲವೇ? ಎಂದು ಪ್ರಶ್ನಿಸಿದರು.

Trending

Exit mobile version