ದಿನದ ಸುದ್ದಿ
ಕೇಂದ್ರದಿಂದ 14 ರಾಜ್ಯಗಳಿಗೆ 7 ಸಾವಿರ ಕೋಟಿ ರೂಪಾಯಿ ಬಿಡುಗಡೆ
ಸುದ್ದಿದಿನ ಡೆಸ್ಕ್ : ವಿಕೇಂದ್ರೀಕರಣ ನಂತರದ ಆದಾಯ ಕೊರತೆ ಅನುದಾನದಡಿಯಲ್ಲಿ ಎರಡನೇ ಮಾಸಿಕ ಕಂತನ್ನು ಕೇಂದ್ರ ಹಣಕಾಸು ಸಚಿವಾಲಯ ನಿನ್ನೆ 14 ರಾಜ್ಯಗಳಿಗೆ ಒಟ್ಟು ಏಳು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಇದರೊಂದಿಗೆ ರಾಜ್ಯಗಳಿಗೆ ಇದುವರೆಗೆ ಬಿಡುಗಡೆಯಾದ ಒಟ್ಟು ಮೊತ್ತ 14ಸಾವಿರದ 366 ಕೋಟಿ ರೂಪಾಯಿ ಏರಿಕೆಯಾಗಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಈ ಅನುದಾನ ಬಿಡುಗಡೆ ಮಾಡಲಾಗಿದೆ.
ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಹದಿನೈದನೇ ಹಣಕಾಸು ಆಯೋಗ ಅನುದಾನಕ್ಕೆ ಶಿಫಾರಸು ಮಾಡಿತ್ತು.
ಪ್ರಸಕ್ತ ಹಣಕಾಸು ವರ್ಷಕ್ಕೆ 14 ರಾಜ್ಯಗಳಿಗೆ ಒಟ್ಟು 86 ಸಾವಿರದ 201ಕೋಟಿ ರೂಪಾಯಿಗಳ ವಿಕೇಂದ್ರೀಕರಣ ನಂತರದ ಕಂದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243